ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ದಾಖಲೆಯ 8 ನೇ ಬಜೆಟ್ ಮಂಡಿಸಿದ್ದು, ಬಜೆಟ್ ನಲ್ಲಿ ಗ್ರಾಮೀಣ ಜನತೆಗೆ ಉದ್ಯೋಗ ನೀಡುವ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಹೌದು, ಗ್ರಾಮೀಣ ಪ್ರದೇಶದ ಜನರಿಗೆ ಹಳ್ಳಿಗಳಲ್ಲೇ ಉದ್ಯೋಗ ಒದಗಿಸಲು ಕೇಂದ್ರ ಸರ್ಕಾರದಿಂದ ಯೋಜನೆ ಜಾರಿಗೆ ತರಲಾಗುವುದು. ಗ್ರಾಮಗಳ ಮಟ್ಟದಲ್ಲೇ ವಿಫುಲಉದ್ಯೋಗ ಅವಕಾಶ ಕಲ್ಪಿಸುವುದು. ವಲಸೆ ಎನ್ನುವುದು ಆಯ್ಕೆಯೇ ಹೊರತು ಅನಿವಾರ್ಯವಲ್ಲ ಎಂದು ಸಾರುವುದು ಉದ್ದೇಶವಾಗಿದೆ.
ಇನ್ನು ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ಶೇ. 4 ರ ಬಡ್ಡಿದರದಲ್ಲಿ ಸಿಗುತ್ತಿದ್ದ 3 ಲಕ್ಷ ರೂ. ಸಾಲ ಇನ್ನು 5 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಖಾಸಗಿ ವ್ಯಕ್ತಿಗಳ ಬಳಿಕ ಕೃಷಿ ಅಗತ್ಯಕ್ಕೆ ಸಾಲ ಮಾಡುವ ಅನಿವಾರ್ಯತೆಯಿಂದ ರೈತರು ಬಚಾವ್ ಆಗಲಿದ್ದಾರೆ.