ಬೆಂಗಳೂರು: ನಗರದ ನಾಯಂಡಹಳ್ಳಿ ಕೆರೆಯ ಮುಖ್ಯದ್ವಾರದ ಬಳಿ 2.25 ಗುಂಟೆ ಒತ್ತುವರಿಯಾಗಿದ್ದ ಪ್ರದೇಶವನ್ನು ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿದೆ.
ಪಶ್ಚಿಮ ವಲಯ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ನಾಯಂಡಹಳ್ಳಿ ಕೆರೆಯ ಮೈಸೂರು ರಸ್ತೆಗೆ ಹೊಂದಿಕೊಂಡಿರುವಂತಹ ಮುಖ್ಯದ್ವಾರದ ಬಳಿ 2.25 ಗುಂಟೆ ಪ್ರದೇಶದಲ್ಲಿ ಶೀಟಿನ ಶೆಡ್ ಹಾಕಿಕೊಂಡು ಟಿಂಬರ್ ಶಾಪ್ ನಡೆಸಲಾಗುತ್ತಿರುತ್ತದೆ.
ಕೆರೆಗಳ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಮುಖ್ಯ ಅಭಿಯಂತರರಾದ ವಿಜಯ್ ಕುಮಾರ್ ಹರಿದಾಸ್ ರವರ ನಿದೇರ್ಶನದ ಮೇರೆಗೆ ಇಂದು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿಯಾಗಿದ್ದ ಜಾಗವನ್ನು ತೆರವು ಮಾಡಲು ಸೂಚನೆ ನೀಡಿರುತ್ತಾರೆ.
ಮುಂದುವರಿದು, ಒತ್ತುವರಿಯಾಗಿರುವ 2.25 ಗುಂಟೆ ಪ್ರದೇಶವನ್ನು ಈಗಾಗಲೇ ಭೂಮಾಪಕರು ಸರ್ವೇ ನಡೆಸಿ ಗಡಿಯನ್ನು ಗುರುತಿಸಿರುತ್ತಾರೆ. ಈ ಸಂಬಂಧ ಒತ್ತುರಿಯಾಗಿರುವ ಜಾಗವನ್ನು ಕೂಡಲೆ ತೆರವು ಮಾಡಲು ಟಿಂಬರ್ ಶಾಪ್ ನವರಿಗೆ ತಿಳಿಸಲಾಗಿದ್ದು, ಸ್ವಯಂಪ್ರೇರಿತವಾಗಿ ಅವರೇ ಶೆಡ್ ಹಾಗೂ ಟಿಂಬರ್ ಗಳನ್ನು ತೆರವುಗೊಳಿಸಿಕೊಂಡಿರುತ್ತಾರೆ. ಟಿಂಬರ್ ಶಾಪ್ ತೆರವುಗೊಳಿಸಿದ ಜಾಗಕ್ಕೆ ಕೂಡಲೆ ಫೆನ್ಸಿಂಗ್ ಹಾಕಲಾಗುತ್ತದೆ.
ಈ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಚರಣ್ ರಾಜ್, ಕಾರ್ಯಪಾಲಕ ಅಭಿಯಂತರರಾದ ರವಿ, ಸಿದ್ದರಾಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2025: ಹೊಸ ಆದಾಯ ತೆರಿಗೆ ಸ್ಲ್ಯಾಬ್ ಬಿಡುಗಡೆ, ಇಲ್ಲಿದೆ ಸಂಪೂರ್ಣ ಮಾಹಿತಿ | New Income Tax Slab