ಬೆಂಗಳೂರು: ಬಿಬಿಎಂಪಿ ಇ-ಖಾತಾ ವ್ಯವಸ್ಥೆಯನ್ನು ನಾಗರಿಕರಿಗೆ ಅನುಕೂಲವಾಗುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಬಯಸಿದರೂ ಸಹ, ನಿಮ್ಮ ಮಾಹಿತಿ ಮತ್ತು ಆಸ್ತಿ ಫೋಟೋವನ್ನು ನೀಡದೆ ಅವರು ನಿಮ್ಮ ಅಂತಿಮ ಇ-ಖಾತಾವನ್ನು ರಚಿಸಲು ಸಾಧ್ಯವಿಲ್ಲ.
ಸುಮಾರು 22 ಲಕ್ಷ ಆಸ್ತಿಗಳಿಗೆ ಕರಡು ಇ-ಖಾತಾಗಳನ್ನು ವಾರ್ಡ್‌ವಾರು ಆನ್‌ಲೈನ್‌ನಲ್ಲಿ BBMPeAasthi.karnataka.gov.in ನಲ್ಲಿ ಹಾಕಲಾಗಿರುತ್ತದೆ
ನಿಮ್ಮ ಆಸ್ತಿ ತೆರಿಗೆ ರಶೀದಿಯಿಂದ ನಿಮ್ಮ ವಾರ್ಡ್ ಅನ್ನು ನೀವು ತಿಳಿದುಕೊಳ್ಳಬಹುದು.
ವೀಡಿಯೊ ನೋಡುವ ಮೂಲಕ ಇ-ಖಾತಾ ಪಡೆಯಿರಿ
ಕನ್ನಡ: https://m.youtube.com/watch?v=JR3BxET46po
ಇಂಗ್ಲಿಷ್: https://youtu.be/GL8CWsdn3wo?si=Zu_EMs3SCw5-wQwT
ಇ-ಖಾತಾ ಸಹಾಯವಾಣಿ ಸಂಖ್ಯೆ –
94806 83695
ಮೊಬೈಲ್ ಸಂಖ್ಯೆ ಮತ್ತು OTP ಬಳಸಿ ಲಾಗಿನ್ ಮಾಡಿ ಮತ್ತು ವಾರ್ಡ್‌ವಾರು ಪಟ್ಟಿಯಲ್ಲಿ ಮಾಲೀಕರ ಹೆಸರನ್ನು ಬಳಸಿಕೊಂಡು ನಿಮ್ಮ ಆಸ್ತಿಯನ್ನು ಹುಡುಕಬಹುದಾಗಿದೆ.
(1) ಮಾಲೀಕರ ಆಧಾರ್
(2) ಆಸ್ತಿ ತೆರಿಗೆ ಅರ್ಜಿ ಸಂಖ್ಯೆ (ಆಸ್ತಿ ತೆರಿಗೆ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ದತ್ತಾಂಶವನ್ನು ಪಡೆಯುತ್ತದೆ)
(3) ಮಾರಾಟ/ನೋಂದಣಿ ಪತ್ರದ ಸಂಖ್ಯೆ (ಉಪ ನೋಂದಣಿದಾರರಿಂದ ಸ್ವಯಂಚಾಲಿತವಾಗಿ ಅದನ್ನು ಪಡೆಯುತ್ತದೆ)
(4) ಬೆಸ್ಕಾಂ 10-ಅಂಕಿಯ ಐಡಿ (ಖಾಲಿ ನಿವೇಶನಗಳಿಗೆ ಐಚ್ಛಿಕ)
(5) ಆಸ್ತಿ ಫೋಟೋ
ಬಿಬಿಎಂಪಿ ದಾಖಲೆಗಳೊಂದಿಗೆ ವಿವರಗಳು ಹೊಂದಿಕೆಯಾದರೆ – ನಿಮ್ಮ ಅಂತಿಮ ಇ-ಖಾತಾವನ್ನು ಡೌನ್‌ಲೋಡ್ ಮಾಡಿ.
ಮಾಹಿತಿ ಲಭ್ಯವಿಲ್ಲದಿದ್ದಾಗ ಅಥವಾ ಪಾಲಿಕೆಯ ದಾಖಲೆಗಳೊಂದಿಗೆ ಹೊಂದಿಕೆಯಾಗದಿದ್ದರೆ ಮಾತ್ರ, ಪ್ರಕರಣವನ್ನು ಸಹಾಯಕ ಕಂದಾಯ ಅಧಿಕಾರಿಗೆ ಉಲ್ಲೇಖಿಸಲಾಗುತ್ತದೆ.