ಬೆಂಗಳೂರು : ಕಂದಾಯ ಘಟಕದಲ್ಲಿ ಖಾಲಿ ಇರುವ 1000 ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗಿತ್ತು.ಇದೀಗ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿದ್ದು, ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಅಧಿಸೂಚನೆ ದಿನಾಂಕ: 23.12.2024 ರ ಮೂಲಕ ಕಂದಾಯ ಇಲಾಖೆಯ ಸ್ಥಳೀಯ ವೃಂದದ (IIK) ಮತ್ತು ಸ್ಥಳಿಯೇತರ ವೃಂದದ (Non IIK)ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ 13 ರ ಅನುಪಾತದ ದಾಖಲೆ ಪರಿಶೀಲನೆಗಾಗಿ ಪಟ್ಟಿಯನ್ನು ಪ್ರಕಟಿಸಲಾಗಿದೆ ಉಲ್ಲೇಖಿತ ಅಧಿಸೂಚನೆ ದಿನಾಂಕ: 15/01/2025 ರಂದು 11 ರ ಅನುಪಾತದ ತಾತ್ಕಲಿಕ ಪಟ್ಟಿಯನ್ನು ಪ್ರಕಡಿಸಲಾಗಿ ಆಕ್ಷೇಪಣಿ ಕರೆಯಲಾಗಿದೆ.
ಮುಂದುವರೆದು ದಾಖಲೆಗಳ ಪರಿಶೀಲನೆ ಕಾರ್ಯ ಮುಗಿದಿರುವುದರಿಂದ ಹಾಗೂ ಆಕ್ಷೇಪಣಿಗಳನ್ನು ಸ್ವೀಕರಿಸಲಾಗಿ 11 ರ ಅನುಪಾತದ ಅಂತಿಮ ಆಯ್ಕೆ ಪಟ್ಟಿಯನ್ನು ಬೀದರ ಜಿಲ್ಲೆಯ ವೇಬಸೈಲ್ https://bidar.nic.in) ನಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
(ವಿಶೇಷ ಸೂಚನೆ:- ಕಲ್ಯಾಣ ಕರ್ನಾಟಕ ವೃಂದ ಹಾಗೂ ಮಿಕ್ಕುಳಿದ ವೃಂದಗಳೆರಡು ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಎರಡರಲ್ಲಿ ಒಂದು ವೃಂದದ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದೆ (ಸಿಂಧುತ್ವ ಪ್ರಮಾಣ ಪತ್ರ ಮತ್ತು ಪೊಲಿಸ್ ವರದಿ, ಪಿ.ಯು.ಸಿ/12ನೇ ತರಗತಿ ಅಂಕ ಪಟ್ಟಿಯ ನೈಜತೆ ಪರಿಶೀಲಿಸಿಕೊಂಡ ಬಳಿಕ) ಹಾಗೂ ಅಭ್ಯರ್ಥಿಯು ಎರಡು ವೃಂದದ ಹುದ್ದೆಯಲ್ಲಿ ಒಂದು ಹುದ್ದೆಯನ್ನು ಆಯ್ಕೆ ಮಾಡಿಕೊಂಡ ಬಳಿಕ ಉಳಿದಕೊಳ್ಳುವ ರಿಕ್ತ ಸ್ಥಾನಕ್ಕೆ ಮಿರಿಟ್ ಆಧಾರದಲ್ಲಿ ಕೆಳಗಿನ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಆಯ್ಕೆಪಟ್ಟಿ ಚೆಕ್ ಮಾಡುವುದು ಹೇಗೆ..?
1) ಅಭ್ಯರ್ಥಿಗಳು ತಮ್ಮ ಜಿಲ್ಲೆಯ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ
2) ನೀವು ಕೊಪ್ಪಳ ಜಿಲ್ಲೆಯವರಾಗಿದ್ದರೆ https://Koppal.nic.in ಭೇಟಿ ನೀಡಿ
3) ನಂತರ ಮುಖಪುಟದಲ್ಲಿ Koppal District Village Administrative Officer Recruitment 2024 – Final Selection List / VAO Additional Selection List / VAO Waiting List ಮೇಲೆ ಕ್ಲಿಕ್ ಮಾಡಿ
4) ನಂತರ ಪಿಡಿಎಫ್ ವೆಬ್ಪೇಜ್ ಓಪನ್ ಆಗುತ್ತದೆ.
5) ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ .