ಫಿಲಿಫೈನ್ಸ್ : ಇಂದು ಬೆಳ್ಳಂಬೆಳಗ್ಗೆ ಫಿಲಿಫೈನ್ಸ್ ನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜನರಲ್ಲಿ ಭೀತಿ ಉಂಟಾಗಿದೆ.
ಭೂಕಂಪದ ಬಲವಾದ ಕಂಪನಗಳೊಂದಿಗೆ ಭೂಮಿಯು ಮತ್ತೊಮ್ಮೆ ನಡುಗಿದೆ. ಇಂದು ಬೆಳಿಗ್ಗೆ ಫಿಲಿಪೈನ್ಸ್‌ನಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದೆ. ಇಂದು ಬೆಳಿಗ್ಗೆ ಮಧ್ಯ ಫಿಲಿಪೈನ್ಸ್‌ನಲ್ಲಿ ಭೂಕಂಪ ಸಂಭವಿಸಿದ್ದು, ಜನರಲ್ಲಿ ಭೀತಿ ಉಂಟಾಗಿದೆ.
❗️5.9 magnitude earthquake in Central Philippines off the coast of Leyte province#Philippines pic.twitter.com/Sy6Tc0hW3m
— Global Nexus (@NexusGlobal01) January 23, 2025
ರಿಕ್ಟರ್ ಮಾಪಕದಲ್ಲಿ ಭೂಕಂಪಗಳ ತೀವ್ರತೆ 5.4 ಮತ್ತು 5.9 ಎಂದು ದಾಖಲಾಗಿದೆ. ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ (PHIVOLCS) ಭೂಕಂಪವನ್ನು ದೃಢಪಡಿಸಿದ್ದು, ಭೂಕಂಪದ ಕೇಂದ್ರ ಬಿಂದು ಸಮುದ್ರ ಮಟ್ಟದಿಂದ 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಕಂಡುಬಂದಿದ್ದು, ಲೇಟ್ ಪ್ರಾಂತ್ಯದ ಸ್ಯಾನ್ ಫ್ರಾನ್ಸಿಸ್ಕೋ ಪಟ್ಟಣದ ಬಳಿ ಕೇಂದ್ರೀಕೃತವಾಗಿದೆ ಎಂದು ತಿಳಿಸಿದೆ. ಏಜೆನ್ಸಿ ಸುಮಾರು 45 ಕಂಪನಗಳನ್ನು ದಾಖಲಿಸಿದೆ. ನಗರ ಮುಖ್ಯಸ್ಥ ಬಾರ್ನೆ ಕ್ಯಾಟಿಗ್ ಭೂಕಂಪವನ್ನು ದೃಢಪಡಿಸಿದರು ಮತ್ತು ಕಂಪನಗಳು ತುಂಬಾ ಪ್ರಬಲವಾಗಿದ್ದು, ದೇಶದಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ ಎಂದು ಹೇಳಿದರು.
An earthquake occurred in the region of Eastern Visayas, Philippines with Magnitude 5.9 on January 23, 2025 at 7.39 AM.
Visuals of CCTV captured the moment of an earthquake hits Southern Leyte, Eastern Visayas.
[🎥: Tatay Antonio Remojo] pic.twitter.com/LlNS4ZtVcb
— RenderNature (@RenderNature) January 23, 2025