ಜಲ್ಗಾಂವ್ : ಮಹಾರಾಷ್ಟ್ರದ ಜಲ್ಗಾಂವ್’ನಲ್ಲಿ ಬುಧವಾರ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದು ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ದುರಂತದಲ್ಲಿ 30 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪುಷ್ಪಕ್ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ತಗುಲಿದೆ ಎನ್ನುವ ವದಂತಿ ಹಬ್ಬಿದ್ದು, ಇದ್ರಿಂದ ಭಯಭೀತರಾದ ಪ್ರಯಾಣಿಕರು ಹಳಿಗೆ ಹಾರಿ ಓಡುತ್ತಿರುವಾಗ ಕರ್ನಾಟಕ ಎಕ್ಸ್ಪ್ರೇಸ್ ಅವರ ಮೇಲೆ ಹರಿದಿದೆ. ಆದಾಗ್ಯೂ, ಬೆಂಕಿಯ ಬಗ್ಗೆ ವದಂತಿಯನ್ನು ಇನ್ನೂ ದೃಢಪಡಿಸಲಾಗಿಲ್ಲ ಎಂದು ಜಲ್ಗಾಂವ್ ಜಿಲ್ಲಾಧಿಕಾರಿ ಹೇಳಿದ್ದಾರೆ.
ರೈಲಿನ ಚೈನ್ ಪುಲ್ಲಿಂಗ್ ನಂತ್ರ ಹಳಿಗಳ ಮೇಲೆ ಹೆಜ್ಜೆ ಹಾಕಿದ ಇತರ ರೈಲಿನ ಪ್ರಯಾಣಿಕರ ಮೇಲೆ ರೈಲು ಹರಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.