ಪ್ರಯಾಗರಾಜ್ : ವಿಶ್ವದ ಅತಿ ದೊಡ್ಡ ಧಾರ್ಮಿಕ ಸಭೆ ಅಂದರೆ ಮಹಾಕುಂಭ ಉತ್ತರ ಪ್ರದೇಶದ ಪ್ರಯಾಗರಾಜ್’ನಲ್ಲಿ ನಡೆಯುತ್ತಿದೆ. ಈ ಮಹಾಕುಂಭ ಮೇಳದ ಚಿತ್ರಗಳನ್ನ ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ತನ್ನ ಉಪಗ್ರಹಗಳ ಸಹಾಯದಿಂದ ಸೆರೆಹಿಡಿದಿದೆ (ISRO Mahakumbh Satellite Images). ಇಸ್ರೋ ತೆಗೆದ ಚಿತ್ರಗಳು ಕುಂಭಮೇಳಕ್ಕಾಗಿ ನಿರ್ಮಿಸಲಾದ ಬೃಹತ್ ಮೂಲಸೌಕರ್ಯಗಳನ್ನ ತೋರಿಸುತ್ತವೆ. 45 ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸುಮಾರು 40 ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇಸ್ರೋ ಚಿತ್ರಗಳನ್ನ ಸೆರೆಹಿಡಿಯಲು ಅತ್ಯಾಧುನಿಕ ಆಪ್ಟಿಕಲ್ ಉಪಗ್ರಹಗಳನ್ನ ಮತ್ತು ಹಗಲು ರಾತ್ರಿ ಸೆರೆಹಿಡಿಯುವ ಸಾಮರ್ಥ್ಯವಿರುವ ರಾಡಾರ್‌ಸ್ಯಾಟ್’ಗಳನ್ನ ಬಳಸಿದೆ. ಮಹಾಕುಂಭ ಮೇಳದ ಭವ್ಯವಾದ ಮೂಲಸೌಕರ್ಯದ ಈ ಚಿತ್ರಗಳನ್ನ ಹೈದರಾಬಾದ್’ನಲ್ಲಿರುವ ರಾಷ್ಟ್ರೀಯ ದೂರಸಂವೇದಿ ಕೇಂದ್ರದಿಂದ ತೆಗೆದುಕೊಳ್ಳಲಾಗಿದೆ.
ಈ ಚಿತ್ರಗಳು ನದಿ ಜಾಲದಲ್ಲಿ ಹೆಚ್ಚಿನ ಸಂಖ್ಯೆಯ ತಾತ್ಕಾಲಿಕ ಟೆಂಟ್ ನಗರಗಳು ಮತ್ತು ಪಾಂಟೂನ್ ಸೇತುವೆಗಳನ್ನ ತೋರಿಸಿವೆ. ಏತನ್ಮಧ್ಯೆ, ಎನ್‌ಆರ್‌ಎಸ್‌ಸಿ ನಿರ್ದೇಶಕ ಡಾ.ಪ್ರಕಾಶ್ ಚೌಹಾಣ್ ಅವರು ಚಿತ್ರಗಳನ್ನು ತೆಗೆದುಕೊಳ್ಳಲು ರಾಡಾರ್‌ಸ್ಯಾಟ್ ಬಳಸಿದ್ದಾರೆ. ಯಾಕಂದ್ರೆ, ಇದರೊಂದಿಗೆ ಮೋಡಗಳಿಂದ ಆವೃತವಾಗಿರುವ ಪ್ರಯಾಗ್‌ರಾಜ್ ಕುಂಭಮೇಳ ಪ್ರದೇಶದ ಚಿತ್ರಗಳನ್ನ ಸುಲಭವಾಗಿ ತೆಗೆಯಬಹುದು.
BREAKING : ಬಿಜೆಪಿಗೆ ಮತ್ತೊಂದು ಶಾಕ್ : ಪಕ್ಷ ತೊರೆಯುವುದಾಗಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ!
SHOCKING : ಮೈಸೂರು : ದನದ ಕೊಟ್ಟಿಗೆಯಲ್ಲಿ ‘ಖೋಟಾ ನೋಟ್’ ಪ್ರಿಂಟ್ ಮಾಡುತ್ತಿದ್ದ ತಂದೆ ಮಗ ಅರೆಸ್ಟ್!