ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ನಡುವೆ ಬೆಂಗಳೂರಿನಲ್ಲಿ ದರೋಡೆ ಗ್ಯಾಂಗ್ ವೊಂದು ಯುವಕನನ್ನು ಅಪಹರಿಸಿ ಬಳಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಆನೇಕಲ್ ನ ಹೊಸೂರು ಮುಖ್ಯರಸ್ತೆಯಲ್ಲಿ ಯುವಕನನ್ನು ದರೋಡೆ ಗ್ಯಾಂಗ್ ವೊಂದು ಅಪಹರಿಸಿದ್ದು, ಬಳಿಕ ಆತನ ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಿ ಪರಾರಿಯಾಗಿದೆ. ಗಾಂಜಾ ಹಾಗೂ ಕುಡಿದ ಮತ್ತಿನಲ್ಲಿ ಮನಬಂದಂತೆ ಥಳಿಸಿದ್ದು, ಸದ್ಯ ಯುವಕ ಮುರುಳಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮುರಳಿ ಆನೇಕಲ್ ಮುತ್ತಗಟ್ಟಿ ಕುವೆಂಪು ನಗರದ ನಿವಾಸಿಯಾಗಿದ್ದು, ಸಂಜೆ ಅಕ್ಕನ ಮಗಳನ್ನು ಕಾಲೇಜಿನಿಂದ ಕರೆದುಕೊಂಡ ಬರಲು ಹೋದಾಗ ದರೋಡೆ ಗ್ಯಾಂಗ್ ಯುವಕನನ್ನು ಅಪಹರಿಸಿ ನಿರ್ಜನ ಪ್ರದೇಶದಲ್ಲಿ ಥಳಿಸಿ ಮೊಬೈಲ್, ಪರ್ಸ್ ಕಿತ್ತುಕೊಂಡು ಪರಾರಿಯಾಗಿದೆ.