ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, 6 ಮಂದಿ ಡಿವೈಎಸ್‌ಪಿ (ಸಿವಿಲ್) ರವರುಗಳ ವರ್ಗಾವಣೆ/ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ.
ಉಲ್ಲೇಖಿತ ದಿನಾಂಕದಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ, ಈ ಕೆಳಕಂಡ ಡಿವೈಎಸ್‌ಪಿ (ಸಿವಿಲ್) ರವರುಗಳನ್ನು ಅವರ ಹೆಸರಿನ ಮುಂದೆ ತೋರಿಸಿರುವ ಸ್ಥಳಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ ಆದೇಶಿಸಲಾಗಿದೆ.
1. ಮೋಹನ್ ಕುಮಾರ್ ಆರ್.
2 ಮಹೇಶ್ ಕುಮಾರ್
3 ಕುಮಾರ್ ಎಸ್
4 ಕುಮಾರಸ್ವಾಮಿ
5 ಲೋಕೇಶ್ವರಪ್ಪ ಎಸ್
6 ಪಾಂಡುರಂಗಯ್ಯ ಎಂ
ಸಂಬಂಧಪಟ್ಟ ಘಟಕಾಧಿಕಾರಿಗಳು, ಮೇಲ್ಕಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ. ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸುವುದು ಹಾಗೂ ಸದರಿ ಅಧಿಕಾರಿಗಳು ಬಿಡುಗಡೆಗೊಂಡ ಮತ್ತು ವರದಿ ಮಾಡಿದ ಬಗ್ಗೆ ಈ ಕಛೇರಿಗೆ ಪಾಲನಾ ವರದಿ ಸಲ್ಲಿಸುವುದು.
ಮೇಲ್ಕಂಡ ವರ್ಗಾವಣಾ ಆದೇಶದಲ್ಲಿ ಸ್ಥಳ ನಿಯುಕ್ತಿಗೊಳಿಸದಿರುವ ಡಿವೈಎಸ್‌ಪಿ ವೃಂದದ ಅಧಿಕಾರಿಗಳು ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವರದಿ ಮಾಡಿಕೊಳ್ಳುವುದು.