ಮುಂಬೈ : ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿಯನ್ನು ಕರೆತಂದು ಸ್ಥಳ ಮಹಜರು ಮಾಡಿದ್ದು, ಅಪರಾಧ ಕೃತ್ಯವನ್ನು ಮರುಸೃಷ್ಟಿಸಿದ್ದಾರೆ.
ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸದಲ್ಲಿ ನಡೆದ ಅಪರಾಧ ದೃಶ್ಯವನ್ನು ಮುಂಬೈ ಪೊಲೀಸರು ಮರುಸೃಷ್ಟಿಸಿದ್ದಾರೆ. ಬಾಂದ್ರಾ ರೈಲು ನಿಲ್ದಾಣ, ಸೈಫ್ ಅಲಿ ಖಾನ್ ಮನೆ ಸಮೀಪ ಅಪರಾಧ ಕೃತ್ಯವನ್ನು ಮರು ಸೃಷ್ಟಿಸಲಾಗಿದೆ.
ಪ್ರಕರಣ ಸಂಬಂಧ 30 ವರ್ಷದ ಬಾಂಗ್ಲಾದೇಶದ ಶರೀಫುಲ್ ಇಸ್ಲಾಂ ಶೆಹಜಾದ್ ಮೊಹಮ್ಮದ್ ರೋಹಿಲ್ಲಾ ಅಮೀನ್ ಫಕೀರ್ ಎಂಬಾತನನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದೆ. ನ್ಯಾಯಾಲಯವು ಶರೀಫುಲ್ ಇಸ್ಲಾಂಗೆ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕಳ್ಳತನದ ಉದ್ದೇಶದಿಂದ ಶೆಹಜಾದ್ ಜನವರಿ 16 ರ ಮುಂಜಾನೆ ಬಾಲಿವುಡ್ ತಾರೆಯ ಅಪಾರ್ಟ್ಮೆಂಟ್ಗೆ ನುಸುಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.