ಮಂಡ್ಯ : ವೀಲಿಂಗ್ ಮಾಡಲು ಹೋಗಿ ಮೂವರು ಪೈಕಿ ಇಬ್ಬರಿಗೆ ಕೈ, ಕಾಲು ಹಾಗೂ ಒಬ್ಬನಿಗೆ ತಲೆಗೆ ಗಾಯಗೊಂಡಿರುವ ಘಟನೆ ಮದ್ದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಜರುಗಿದೆ.
ಮದ್ದೂರು ಪಟ್ಟಣದ ಶಿವಪುರ ನಿವಾಸಿಗಳಾದ ಪ್ರಜ್ವಲ್, ಶಿವರಾಜ್ ಹಾಗೂ ಕುಮಾರ್ ಮೂವರು ಯುವಕರು ಶಿವಪುರದ ಹಳೇ ಬೆಂಗಳೂರು – ಮೈಸೂರು ರಾಷ್ಟ್ರಿಯ ಹೆದ್ದಾರಿ ಮೂಲಕ ಸೋಮನಹಳ್ಳಿಗೆ ತೆರಳುತ್ತಿದ್ದಾಗ ವೀಲಿಂಗ್ ಮಾಡಲು ಹೋಗಿ ಪಲ್ಸರ್ ಬೈಕ್ ನಿಯಂತ್ರಣ ಕಳೆದುಕೊಂಡು ಪದ್ಮಾವತಿ ಕಲ್ಯಾಣ ಮಂಟಪದ ಮುಂಭಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಾರೆ.
ಡಿಕ್ಕಿಯ ರಭಸಕ್ಕೆ ಪ್ರಜ್ವಲ್ ನ ಕೈ, ಕುಮಾರ ನ ಕಾಲು ಹಾಗೂ ಶಿವರಾಜ್ ತಲೆಗೆ ಗಂಭೀರ ಗಾಯವಾಗಿದೆ. ತಕ್ಷಣವೇ ಮೂವರನ್ನು ಸಾರ್ವಜನಿಕರು ಹಾಗೂ ವಾಹನ ಸವಾರರು ಮದ್ದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಸಂಬಂಧ ಮದ್ದೂರು ಸಂಚಾರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸೋ ನೀವು ವೀಲ್ಹಿಂಗ್ ಮಾಡುತ್ತಿದ್ದರೇ ಬಿಟ್ಟು ಬಿಡಿ. ಯಾಕೆಂದ್ರೇ ಹೀಗೆ ಅನಾಹುತವಾಗಬಹುದು. ಜೊತೆಗೆ ನಿಮ್ಮ ಮೇಲೆ ಪೊಲೀಸರು ಕೇಸ್ ಬುಕ್ ಮಾಡಿ ಜೈಲಿಗಟ್ಟಬಹುದು.
ವರದಿ : ಗಿರೀಶ್ ರಾಜ್, ಮಂಡ್ಯ
KSOUದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪ್ರವೇಶಾತಿ ಪಡೆದವರಿಗೆ ಮಹತ್ವದ ಮಾಹಿತಿ
ನೀವು ‘ತೊದಲುವಿಕೆ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ.? ಈ ಉಚಿತ ಕಾರ್ಯಾಗಾಲದಲ್ಲಿ ಭಾಗವಹಿಸಿ, ತೊಂದ್ರೆ ಕ್ಲಿಯರ್