ಬೆಂಗಳೂರು: ಕಡೂರು ಮತ್ತು ಬೀರೂರು ನಿಲ್ದಾಣದ ಯಾರ್ಡ್ ಗಳಲ್ಲಿ ಸುರಕ್ಷತೆಗೆ ಸಂಬಂಧಿಸಿದ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು, ಮರು ವೇಳಾಪಟ್ಟಿ ನಿಗದಿ/ನಿಯಂತ್ರಿಸಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ:
ರೈಲುಗಳ ಭಾಗಶಃ ರದ್ದು:
1. ಜನವರಿ 25 ಮತ್ತು ಫೆಬ್ರವರಿ 1, 2025 ರಂದು ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್-ಚಿಕ್ಕಮಗಳೂರು ಡೈಲಿ ಪ್ಯಾಸೆಂಜರ್ ರೈಲು ಬೀರೂರು ಮತ್ತು ಚಿಕ್ಕಮಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲಿನ ಸೇವೆ ಬೀರೂರಿನಲ್ಲಿ ಕೊನೆಗೊಳ್ಳಲಿದೆ.
ರೈಲುಗಳ ಮರು ವೇಳಾಪಟ್ಟಿ/ನಿಯಂತ್ರಣ:
1. ಜನವರಿ 21 ಮತ್ತು ಫೆಬ್ರವರಿ 4 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16213 ಅರಸೀಕೆರೆ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು ಅರಸೀಕೆರೆಯಿಂದ 75 ನಿಮಿಷ ತಡವಾಗಿ ಹೊರಡಲಿದೆ.
2. ಜನವರಿ 21 ಮತ್ತು ಫೆಬ್ರವರಿ 4 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 56906 ಎಸ್ಎಸ್ಎಸ್ ಹುಬ್ಬಳ್ಳಿ-ಸೋಲಾಪುರ ಡೈಲಿ ಪ್ಯಾಸೆಂಜರ್ ರೈಲು ಹುಬ್ಬಳ್ಳಿಯಿಂದ 75 ನಿಮಿಷ ತಡವಾಗಿ ಹೊರಡಲಿದೆ.
3. ಜನವರಿ 25 ಮತ್ತು ಫೆಬ್ರವರಿ 1 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ-ಅರಸೀಕೆರೆ ಡೈಲಿ ಎಕ್ಸ್ ಪ್ರೆಸ್ ರೈಲು ಹುಬ್ಬಳ್ಳಿಯಿಂದ 75 ನಿಮಿಷ ತಡವಾಗಿ ಹೊರಡಲಿದೆ. ಮತ್ತು ಈ ರೈಲು ಮಾರ್ಗ ಮಧ್ಯ 60 ನಿಮಿಷ ನಿಯಂತ್ರಣವಾಗಲಿದೆ.
ನಾನು ಕೋರೆ ಅವರನ್ನು ಪಕ್ಷಕ್ಕೆ ಕರೆದಿಲ್ಲ, ಅವರು ಬರೋದು ಇಲ್ಲ, ಸೌಹಾರ್ದ ಭೇಟಿ ಅಷ್ಟೇ: DKS ಸ್ಪಷ್ಟನೆ
ನೀವು ‘ತೊದಲುವಿಕೆ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ.? ಈ ಉಚಿತ ಕಾರ್ಯಾಗಾಲದಲ್ಲಿ ಭಾಗವಹಿಸಿ, ತೊಂದ್ರೆ ಕ್ಲಿಯರ್