ನವದೆಹಲಿ : ಮದುವೆ ಆಮಂತ್ರಣ ಪತ್ರಿಕೆ ಹಂಚಲು ತೆರಳಿದ್ದ ವೇಳೆ ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಮದುವೆಯ ವರ ಕಾರಿನಲ್ಲಿ ಸುಟ್ಟು ಕರಕಲಾಗಿರುವ ಘೋರ ಘಟನೆ ನವದೆಹಲಿಯ ಘಾಜಿಪುರದ ಬಾಬಾ ಬ್ಯಾಂಕ್ವೆಟ್ ಹಾಲ್ ಬಳಿ ನಡೆದಿದೆ.
ಹೌದು ಗ್ರೇಟರ್ ನೋಯ್ಡಾದ ನಿವಾಸಿ ಅನಿಲ್ ಮೃತ ವರ ಎಂದು ತಿಳಿದುಬಂದಿದೆ. ನಿನ್ನೆ ಅನೀಲ್ ಆಮಂತ್ರಣ ಪತ್ರಿಕೆ ಹಂಚಲು ಹೊರಗೆ ಹೋಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಸಂಜೆಯಾದರೂ ವಾಪಸ್ ಬಾರದ್ದನ್ನು ಕಂಡು ಕರೆ ಮಾಡಿದೆವು. ಆದರೆ ಅವರ ಮೊಬೈಲ್ ಸ್ವಿಚ್‌ಆಫ್ ಆಗಿತ್ತು.
VIDEO | Car catches fire on Delhi-Meerut expressway near Ghazipur. More details awaited.
(Full video available on PTI Videos – https://t.co/n147TvrpG7) pic.twitter.com/pV1yCMLGcl
— Press Trust of India (@PTI_News) January 17, 2025
ರಾತ್ರಿ 11:30ರ ಸುಮಾರಿಗೆ ಅನಿಲ್‌ಗೆ ಅಪಘಾತವಾಗಿದ್ದು, ಆಸ್ಪತ್ರೆಯಲ್ಲಿದ್ದಾರೆ ಎಂದು ಪೊಲೀಸರು ಕರೆ ಮಾಡಿದ್ದರು ಎಂದು ಅನಿಲ್ ಅಣ್ಣ ಸುಮಿತ್ ತಿಳಿಸಿದ್ದಾರೆ. ಈ ಒಂದು ಅಪಘಾತದಲ್ಲಿ ಕಾರಿಗೆ ಹೇಗೆ ಬೆಂಕಿ ಹತ್ತಿಕೊಂಡಿದೆ ಎನ್ನುವುದು ಮಾತ್ರ ತಿಳಿದಿಲ್ಲ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.