ಉತ್ತರಪ್ರದೇಶ: ಇಲ್ಲಿನ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವಂತ ಮಹಾಕುಂಭಮೇಳದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಕ್ಷಣ ಕ್ಷಣಕ್ಕೂ ಗಾಳಿಯಿಂದಾಗಿ ಬೆಂಕಿ ಒಂದು ಟೆಂಟ್ ನಿಂದ ಮತ್ತೊಂದು ಟೆಂಟಿಗೆ ವ್ಯಾಪಿಸುತ್ತಿದ್ದು, ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
#WATCH | Prayagraj, Uttar Pradesh: The fire that broke out in #MahaKumbhMela2025 has been brought under control pic.twitter.com/ECdae31X4Q
— ANI (@ANI) January 19, 2025
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಮಹಾಕುಂಭ ಮೇಳದ ಸೆಕ್ಟರ್ 19ರಲ್ಲಿ ಸಿಲಿಂಡರ್ ಸ್ಪೋಟದಿಂದಾಗಿ ಟೆಂಟ್ ಒಂದರಲ್ಲಿ ಅಗ್ನಿ ಅವಘಡ ಉಂಟಾಗಿತ್ತು. ಈ ಬಳಿಕ ಅದೇ ಸಾಲಿನಲ್ಲಿನ ಇತರೆ ಟೆಂಟ್ ಗಳಿಗೂ ಬೆಂಕಿ ವ್ಯಾಪಿಸಿದ ಪರಿಣಾಮ 12ಕ್ಕೂ ಹೆಚ್ಚು ಸಿಲಿಂಡರ್ ಸ್ಪೋಟಗೊಂಡು ಭೀಕರ ಅಗ್ನಿ ದುರಂತವೇ ಸಂಭವಿಸಿದೆ.
Prayagraj: Fire breaks out at Maha Kumbh mela, fire brigade reaches the spot.#Fire #Prayagraj #Mahakumbh pic.twitter.com/Xjmf4G49no
— IndiaToday (@IndiaToday) January 19, 2025
ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭಮೇಳ 2025 ರಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಹಿತಿ ಪಡೆದಿದ್ದಾರೆ. ಅಲ್ಲದೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಬೆಂಕಿ ನಿಯಂತ್ರಣಕ್ಕೆ ತರುವಂತೆ ಸೂಚಿಸಿದ್ದಾರೆ. ಜೊತೆಗೆ ಹಿರಿಯ ಅಧಿಕಾರಿಗಳಿಗೆ ಸ್ಥಳದಲ್ಲೇ ಇದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
Fire at #MahaKumbhMela2025 | Uttar Pradesh CM Yogi Adityanath took cognizance of the fire incident that took place in the #MahaKumbhMela2025, in Prayagraj. Fire tenders are present at the spot and have been brought under control. Senior officers are present on the spot on the…
— ANI (@ANI) January 19, 2025
ಪತ್ನಿ ಮೇಲೆ ಹಲ್ಲೆ, ವರದಕ್ಷಿಣೆ ಕಿರುಕುಳ: ಚಿಕ್ಕಮಗಳೂರಿನ ಕಳಸ ಠಾಣೆ PSI ನಿತ್ಯಾನಂದ ಸಸ್ಪೆಂಡ್
BREAKING : ಡಿಸಿಎಂ ಡಿಕೆ ಶಿವಕುಮಾರ್ ನೆಕ್ಸ್ಟ್ ‘CM’ ಅಗಲಿ ಎಂದು ‘ತ್ರಿಶೂಲ’ ನೀಡಿ ಆಶೀರ್ವದಿಸಿದ ಅರ್ಚಕರು!