ಚಿಕ್ಕಮಗಳೂರು: ಜಿಲ್ಲೆಯ ಕಳಸ ಪೊಲೀಸ್ ಠಾಣೆಯ ಪಿಎಸ್ಐ ನಿತ್ಯಾನಂದ ಎಂಬುವರ ವಿರುದ್ಧ ಪತ್ನಿಯ ಮೇಲೆ ಹಲ್ಲೆ, ವರದಕ್ಷಿಣೆ ಕಿರುಕುಳ ಆರೋಪದಡಿ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಿ ದಕ್ಷಿಣ ವಲಯದ ಐಜಿಪಿ ಅಮಿತ್ ಸಿಂಗ್ ಆದೇಶಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಂತ ನಿತ್ಯಾನಂತ ವಿರುದ್ಧ ರಾತ್ರೋರಾತ್ರಿ ಠಾಣೆಗೆ ತೆರಳಿದ್ದಂತ ಅವರ ಪತ್ನಿ ಅಮಿತಾ ಎಂಬುವರು ಹಲ್ಲೆ, ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ನೀಡಿದ್ದರು.
ದೂರಿನಲ್ಲಿ ನನಗೆ ಪತಿ ಪಿಎಸ್ಐ ನಿತ್ಯಾನಂದ ಮಾನಿಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಕಳಸ ಪೊಲೀಸ್ ವಸತಿ ಗೃಹದಲ್ಲಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಿತ್ಯಾನಂದನಿಗೆ ಅನೈತಿಕ ಸಂಬಂಧವಿದೆ ಎಂಬುದಾಗಿ ಆರೋಪಿಸಿ ಕಳಸ ಠಾಣೆಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಪಿಎಸ್ಐ ನಿತ್ಯಾನಂದ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಈ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಿ ದಕ್ಷಿಣ ವಲಯದ ಐಜಿ ಅಮಿತ್ ಸಿಂಗ್ ಆದೇಶಿಸಿದ್ದಾರೆ.
‘PM ಜನ್ ಮನ್ ಯೋಜನೆ’ಗೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ‘ಪೂವನಹಳ್ಳಿ’ ಆಯ್ಕೆ: HDK ಘೋಷಣೆ
BREAKING: ಖ್ಯಾತ ಕ್ರಿಕೆಟಿಗ ಶಕೀಬ್ ಅಲ್ ಹಸನ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ | Cricketer Shakib Al Hasan