ಕತಿಹಾರ್ : ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಒಂದು ದೊಡ್ಡ ದೋಣಿ ಅಪಘಾತ ಸಂಭವಿಸಿದೆ. ಕತಿಹಾರ್‌ನ ಅಹಮದಾಬಾದ್‌ನಲ್ಲಿ ಗಂಗಾ ನದಿಯಲ್ಲಿ ದೋಣಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ.
ದೋಣಿಯಲ್ಲಿ ಒಟ್ಟು 17 ಜನರಿದ್ದು, ಅದರಲ್ಲಿ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ ಅನೇಕ ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ನಾಲ್ಕು ಜನರು ಈಜುವ ಮೂಲಕ ತಮ್ಮ ಜೀವವನ್ನು ಉಳಿಸಿಕೊಂಡರು. ಎಲ್ಲಾ ಜನರು ದಕ್ಷಿಣ ಕರಿಮುಲ್ಲಾಪುರದ ಮೇಘು ಘಾಟ್‌ನಿಂದ ದೋಣಿ ಹತ್ತಿ ಗಡ್ಡೈ ದಿಯಾರಾಗೆ ಹೋಗುತ್ತಿದ್ದರು. ದೋಣಿ ಅಪಘಾತದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ, ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಸ್ಥಳಕ್ಕೆ ತಲುಪಿದ್ದು, ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ.
ಮೃತದೇಹಗಳನ್ನು ಹೊರತೆಗೆಯಲಾದ ಮೂವರಲ್ಲಿ 60 ವರ್ಷದ ಪವನ್ ಕುಮಾರ್, 70 ವರ್ಷದ ಸುಧೀರ್ ಮಂಡಲ್ ಮತ್ತು ಒಂದು ವರ್ಷದ ಮುಗ್ಧ ಮಗು ಸೇರಿದ್ದಾರೆ. ಕಾಣೆಯಾದ ಉಳಿದವರನ್ನು ಹುಡುಕಲು ಎಸ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.
ದೋಣಿಯಲ್ಲಿದ್ದ ಜನರುಕೃಷಿ ಕೆಲಸ ಮಾಡಲು ಡಯಾರಾ ಪ್ರದೇಶಕ್ಕೆ ಹೋಗುತ್ತಿದ್ದರು ಎಂದು ಹೇಳಲಾಗುತ್ತಿದೆ. ಆದರೆ ನದಿಯಯಲ್ಲಿ ದೋಣಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ. ದೋಣಿ ಅಪಘಾತದಲ್ಲಿ ರಕ್ಷಿಸಲ್ಪಟ್ಟ ಜನರನ್ನು ಅಹಮದಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.