ಹರಿಯಾಣ : ಭೀಕರ ಅಪಘಾತದಲ್ಲಿ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರ ಅಜ್ಜಿ, ಚಿಕ್ಕಪ್ಪ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಹರಿಯಾಣದ ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಮನು ಭಾಕರ್ ಅವರ ಅಜ್ಜಿ, ಚಿಕ್ಕಪ್ಪ ಸಾವನಪ್ಪಿದ್ದಾರೆ.ಸ್ಕೂಟರ್ ಮತ್ತು ಬ್ರೆಝಾ ಕಾರು ಡಿಕ್ಕಿ ಹೊಡೆದವು. ಈ ಅಪಘಾತದಲ್ಲಿ ಮನು ಭಾಕರ್ ಅವರ ಅಜ್ಜಿ ಮತ್ತು ಚಿಕ್ಕಪ್ಪ ಸಾವನ್ನಪ್ಪಿದರು. ಈ ಘಟನೆಯಿಂದ ಮನು ಭಾಕರ್ ಮತ್ತು ಅವರ ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ.
ಭಾರತದ ಸ್ಟಾರ್ ಶೂಟರ್ ಮನು ಭಾಕರ್ ಅವರು ಇತ್ತೀಚೆಗೆ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದಿದ್ದರು ಆದರೆ ಇದಾದ ನಂತರ ಅವರ ಕುಟುಂಬದಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿತು. ಅವರ ಅಜ್ಜಿ ಮತ್ತು ಚಿಕ್ಕಪ್ಪ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.