ಬೆಂಗಳೂರು: ನಗರದಲ್ಲಿ ಬಿಲ್ಡರ್ ಗಳಿಂದ ಫ್ಲಾಟ್ ಖರೀದಿಸುವವರಿಗೆ ಮೋಸ ಮಾಡೋದು ಅಲ್ಲಲ್ಲಿ ನಡೆಯುತ್ತಿದೆ. ಬರೋಬ್ಬರಿ 1.2 ಕೋಟಿ ಮೌಲ್ಯದ ಒಂದೇ ಫ್ಲಾಟ್ ಅನ್ನು ಹಲವರಿಗೆ ಬಿಲ್ಡರ್ ಮಾರಾಟ ಮಾಡಿದ್ದಾರೆ. ಈ ಕಾರಣದಿಂದ ಎಫ್ಐಆರ್ ಕೂಡ ದಾಖಲಾಗಿದೆ.
ಬೆಂಗಳೂರಿನ ಬನಶಂಕರಿಯಲ್ಲಿನ 1.2 ಕೋಟಿ ಮೌಲ್ಯದ ಫ್ಲಾಟ್ ಅನ್ನು ವಿದ್ಯಾಸಾಗರ್ ಎಂಬುವರು ಖರೀದಿಸಿದ್ದರು. ಇವರಿಗಷ್ಟೇ ಅಲ್ಲದೇ ಅದೇ ಫ್ಲಾಟ್ ಅನ್ನು ಬಿಲ್ಡರ್ ಐವರಿಗೆ ಮಾರಾಟ ಮಾಡಿದ್ದಾರೆ. ವಿದ್ಯಾಸಾಗರ್ ಅವರು ಬ್ಯಾಂಕ್ ಗೆ ತೆರಳಿ ತಾನು ಖರೀದಿಸಿ ಫ್ಲಾಟ್ ಮೇಲೆ ಲೋನ್ ಪಡೆಯೋದಕ್ಕೆ ಹೋದಾಗ ಇತರರಿಗೂ ಅದೇ ಫ್ಲಾಟ್ ಅನ್ನು ಬಿಲ್ಡರ್ ಮಾರಾಟ ಮಾಡಿರೋದು ಬೆಳಕಿಗೆ ಬಂದಿದೆ.
ಈ ಹಿನ್ನಲೆಯಲ್ಲಿ ವಿದ್ಯಾಸಾಗರ್ ಅವರು ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ರಾಜರಾಜೇಶ್ವರಿ ಬಿಲ್ಡ್ ಕಾನ್ ಪ್ರೈ.ಲಿ, ನೆಟ್ಕಲಪ್ಪ ಸರ್ಕಲ್ ಬಸವನಗುಡಿಯ ಬಿಲ್ಡರ್ ಗಳಾಗಿರುವ ರಂಜಿತ್ ಶಾ, ಮಿತೇಶ್ ಶಾ ಹಾಗೂ ಹರೀಶ್ ಮೇಲೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ.
ಅಂದಹಾಗೇ 2023ರಿಂದ ಬನಶಂಕರಿಯ 2ನೇ ಹಂತದ ಆರ್ ಆರ್ ಬಿಸಿ ಪ್ರಥಮ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದಾರೆ. ಇದೇ ಅಪಾರ್ಟ್ ಮೆಂಟ್ ಅನ್ನು ಇವರನ್ನು ಸೇರಿದಂತೆ 6 ಮಂದಿಗೆ ಸೇಲ್ ಅಗ್ರಿಮೆಂಟ್ ಮಾಡಿಕೊಡಲಾಗಿದೆ. ಈಗ ಆರು ಜನರು ಬಿಲ್ಡರ್ಸ್ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿ ತನಿಖೆ ನಡೆಯುತ್ತಿದೆ.
‘ಮಾನಸಿಕ ಒತ್ತಡ’ ಪರಿಹಾರಕ್ಕೆ ‘ಟೆಲಿ ಮನಸ್ ಸಹಾಯವಾಣಿ’ ಆರಂಭ: ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ
‘BPL, APL ಕಾರ್ಡ್’ದಾರರೇ ಗಮನಿಸಿ: ಜ.31 ‘e-KYC’ಗೆ ಲಾಸ್ಟ್ ಡೇಟ್, ಮಾಡಿಸದಿದ್ರೆ ಬರಲ್ಲ ರೇಷನ್