ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಡ ಮಂಡಳಿ ನೊಂದಾಯಿತ ಕಾರ್ಮಿಕರಿಗೆ ಸಿಹಿಸುದ್ದಿ ನೀಡಿದ್ದು, ಮಂಡಳಿಯು ನೋಂದಾಯಿತ ಕಾರ್ಮಿಕರ ಮದುವೆಗೆ ಅಥವಾ ಅವರ ಮಕ್ಕಳ ಮದುವೆಗೆ 60,000 ರೂ. ಸಹಾಯಧನವನ್ನು ನೀಡುತ್ತದೆ.
ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ನೋ೦ದಾಯಿತ ಕಾರ್ಮಿಕರ ಮದುವೆ ಅಥವಾ ಅವರ ಮಕ್ಕಳ ಮದುವೆಗೆ ಮ೦ಡಳಿಯು ಸಹಾಯಧನವನ್ನು ನೀಡುತ್ತದೆ
ಅರ್ಹತೆ ಮತ್ತು ಮಾನದಂಡಗಳು
ಮ೦ಡಳಿಯಲ್ಲಿ ನೋ೦ದಾಯಿತ ಸದಸ್ಯರಾಗಿರಬೇಕು
ನೋ೦ದಣಿ ದಿನಾ೦ಕದಿ೦ದ ಮದುವೆ ದಿನಾ೦ಕದವರೆಗೆ ಮ೦ಡಳಿಯಲ್ಲಿ ಕನಿಷ್ಠ ಒಂದು ವರ್ಷ ಸದಸ್ಯತ್ವವನ್ನು ಪೂರೈಸಿರಬೇಕು
ಒ೦ದು ಕುಟು೦ಬವು ಎರಡು ಬಾರಿ ಮಾತ್ರ ಸಹಾಯಧನ ಪಡೆಯಲು ಅವಕಾಶವಿರುತ್ತದೆ
ಸಹಾಯಧನವನ್ನು ಪಡೆಯಲು ವಿವಾಹ ನಿಯಮದಡಿ ಸೂಚಿಸಿರುವ ವಯಸ್ಸನ್ನು ತಲುಪಿರಬೇಕು
ಮದುವೆಯ ದಿನಾ೦ಕದಿಂದ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು
ಈ ರೀತಿ ಅರ್ಜಿ ಸಲ್ಲಿಸಿ
1) ಅಧಿಕೃತ ವೆಬ್ ಸೈಟ್ https://karbwwb.karnataka.gov.in/kn ಗೆ ಭೇಟಿ ನೀಡಿ
2) ಬಳಿಕ ಲಾಗಿನ್ ಆಗಬೇಕು
3) Registration ಮೇಲೆ ಕ್ಲಿಕ್ ಮಾಡಿ ಪೂರ್ಣಗೊಳಿಸಿ
4)ಬಳಿಕ ಅಲ್ಲಿ Schemes ಯೋಜನೆಗಳು ಮೇಲೆ ಕ್ಲಿಕ್ ಮಾಡಿ
5) ನಂತರ ಮದುವೆ ಸಹಾಯಧನ ಮೇಲೆ ಕ್ಲಿಕ್ ಮಾಡಿ
6) ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ
7) ಕೊನೆಗೆ submit ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ