ನವದೆಹಲಿ : ಸೈಫ್ ಅಲಿ ಖಾನ್ ಮೇಲಿನ ಹಲ್ಲೆ ಘಟನೆಯ ಇತ್ತೀಚಿನ ಬೆಳವಣಿಗೆಯಲ್ಲಿ, ಮುಂಬೈನ ಬಾಂದ್ರಾ ನಿಲ್ದಾಣದ ಬಳಿ ಪತ್ತೆಯಾದ ಶಂಕಿತ ಆರೋಪಿಗಳ ಹೊಸ ಫೋಟೋ ಹೊರಬಂದಿದೆ.
ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 40 ರಿಂದ 50 ಜನರನ್ನ ಪ್ರಶ್ನಿಸಿದ್ದಾರೆ. ಹೇಳಿಕೆಗಳನ್ನ ದಾಖಲಿಸಿದ ಹೆಚ್ಚಿನ ಜನರು ಸೈಫ್ ಅವರ ಪರಿಚಿತರು. ಪೊಲೀಸರು ಶುಕ್ರವಾರ ಸೈಫ್ ಅವರ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ.
ಸೈಫ್ ಅಲಿ ಖಾನ್ ದಾಳಿ ಪ್ರಕರಣದಲ್ಲಿ ಪೊಲೀಸರಿಗೆ ಹಲವಾರು ಸುಳಿವುಗಳು ದೊರೆತಿವೆ ಮತ್ತು ಶೀಘ್ರದಲ್ಲೇ ಅಪರಾಧಿಯನ್ನು ಬಂಧಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶುಕ್ರವಾರ ಹೇಳಿದ್ದಾರೆ.
ಇನ್ನೂ ಸೈಫ್ ಅಲಿಖಾನ್ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದ್ದು, ಸದ್ಯದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ.