ಮಂಗಳೂರು: ಸ್ವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ ಉಚಿತವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ರಿಪೇರಿ ತರಬೇತಿಗೆ ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ ಮತ್ತು ಸರ್ವಿಸ್(ಸೆಕ್ಯುರಿಟಿ ಆಲಾರಾಂ, ಸ್ಮೋಕ್ ಡಿಟೆಕ್ಟರ್ ) ತರಬೇತಿಯನ್ನು ಆಯೋಜಿಸಲಾಗಿದೆ ಎಂದಿದೆ.
ದಿನಾಂಕ: 29.01.25 ರಿಂದ 10.02.25ರ ವರೆಗೆ (13ದಿನ) ತರಬೇತಿ ನಡೆಯುತ್ತದೆ. ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿದ್ದು 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂಬುದಾಗಿ ತಿಳಿಸಿದೆ.
ಅರ್ಜಿಯನ್ನು ಆಸಕ್ತ ಸ್ವ ಉದ್ಯೋಗಾಕಾಂಕ್ಷಿಗಳು https://forms.gle/9LUE1UvHMAv21vRS7 ಲಿಂಕ್ ಕ್ಲಿಕ್ ಮಾಡುವ ಮೂಲಕ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ 6364561982, 9980885900, 9448348569, 9902594791, 9591044014 ಗೆ ಕರೆ ಮಾಡಿ ಪಡೆಯಬಹುದು. ಇಲ್ಲವೇ ಉಜಿರೆಯ ರುಡ್ ಸೆಟ್ ಸಂಸ್ಥೆಯ ವೆಬ್ ಸೈಟ್ https://www.rudsetujire.com ಗೆ ಭೇಟಿ ನೀಡಿ ಪರಿಶೀಲಿಸಬಹುದು.
ಇನ್ನೂ ನೀವು ಪತ್ರದ ಮೂಲಕ ಅರ್ಜಿ ಸಲ್ಲಿಸುವುದಾದರೇ, ರುಡ್ ಸೆಟ್ ಸಂಸ್ಥೆ, ಉಜಿರೆ, ಧರ್ಮಸ್ಥಳ, ದಕ್ಷಿಣ ಕನ್ನಡ ಇಲ್ಲಿಗೆ ಕಳುಹಿಸುವಂತೆ ಕೋರಿದೆ.
GOOD NEWS: ರಾಜ್ಯದ ‘BPL ಕಾರ್ಡ್’ದಾರರಿಗೆ ಗುಡ್ ನ್ಯೂಸ್: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲೂ ‘ಉಚಿತ ಚಿಕಿತ್ಸೆ’
BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat