ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳು ಕಲಬೆರಕೆಯಾಗುತ್ತಿವೆ. ಅದರಲ್ಲಿ ಟೀ ಪುಡಿ ಕೂಡ ಒಂದು. ತೆಂಗಿನ ಸಿಪ್ಪೆಯ ಪುಡಿ, ಮರದ ತೊಗಟೆ ಪುಡಿ, ಹುಣಸೆಬೀಜದ ಪುಡಿ ಸೇರಿದಂತೆ ವಿವಿಧ ರಾಸಾಯನಿಕಗಳನ್ನ ಬೆರೆಸಿದ ಕಲಬೆರಕೆ ಚಹಾ ಪುಡಿಯನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ನೀವು ಮನೆಯಲ್ಲಿ ಬಳಸುತ್ತಿರುವ ಟೀ ಪುಡಿ ನಕಲಿಯಾಗಿದ್ದರೆ ಅದನ್ನು ಬಳಸುವುದನ್ನು ನಿಲ್ಲಿಸುವುದು ಉತ್ತಮ. ನಕಲಿ ಟೀ ಪುಡಿಯಿಂದ ತಯಾರಿಸಿದ ಟೀ ಕುಡಿಯುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ. ಈ ಕೆಳಗಿನ ಸಲಹೆಗಳಿಂದ ಮನೆಯಲ್ಲಿಯೇ ನಕಲಿ ಟೀ ಪುಡಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ನೀರಿನಿಂದ ಪುಡಿಯನ್ನ ಪರೀಕ್ಷಿಸಿ, ಚಹಾ ಪುಡಿ ಅಸಲಿಯೋ ನಕಲಿಯೋ ಎಂದು ತಿಳಿಯಬಹುದು. ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. ಅದಕ್ಕೆ ಟೀ ಪುಡಿ ಹಾಕಿ. ತಕ್ಷಣ ಬಣ್ಣ ಬಿಟ್ಟರೆ ಅದು ಫೇಕ್, ಪೂರ್ತಿ ಟೀ ಪೌಡರ್ ಕಡು ಬಣ್ಣವಿಲ್ಲದೆ ನೀರಿನ ತಳಕ್ಕೆ ತಲುಪಿದರೆ ಅದು ಅಸಲಿ ಎಂದು ಅರ್ಥ.
ನೀವು ಬಳಸುತ್ತಿರುವ ಟೀ ಪುಡಿ ನಿಜವೇ ಎಂದು ತಿಳಿಯಲು ಇನ್ನೊಂದು ಸಲಹೆಯೆಂದರೇ, ಬ್ರಾಂಡೆಡ್ ಟೀ ಪೌಡರ್ ಖರೀದಿಸಿದರೆ ಟೀ ಪುಡಿಯ ಕಣಗಳು ಹೆಚ್ಚಾಗಿ ಇರುತ್ತವೆ. ಕಲಬೆರಕೆಯಾಗಿದ್ದರೆ, ಚಹಾ ಕಣಗಳು ವಿವಿಧ ಬಣ್ಣಗಳನ್ನ ಹೊಂದಿರುತ್ತವೆ. ಹಸಿರು ಚಹಾ ಒಣಗಿದ್ದರೆ, ಅದರಲ್ಲಿ ಎಲೆಗಳ ಪುಡಿ ಇರಬಹುದು.
ಕಲಬೆರಕೆಯಿಲ್ಲದ ಚಹಾ ಪುಡಿಯಿಂದ ಮಾಡಿದ ಚಹಾವು ಪರಿಮಳಯುಕ್ತ ಮತ್ತು ರುಚಿಕರವಾಗಿರುತ್ತದೆ. ಆದರೆ ಟೀ ಪೌಡರ್ ಕಲಬೆರಕೆ ಮಾಡಿದರೆ ಕಹಿ ರುಚಿ ಬರುತ್ತದೆ. ತಯಾರಾದ ಚಹಾದ ಬಣ್ಣವನ್ನ ಗಮನಿಸಿದರೆ ಪುಡಿ ಅಸಲಿಯೋ ಅಲ್ಲವೋ ಎಂದು ತಿಳಿಯಬಹುದು. ಚಹಾವು ಸಾಕಷ್ಟು ಸ್ಪಷ್ಟವಾದ ಬಣ್ಣವನ್ನ ಹೊಂದಿದ್ದರೆ ಅದು ಶುದ್ಧವಾಗಿದೆ ಎಂದರ್ಥ. ಮಂದ ಅಥವಾ ಅಸ್ವಾಭಾವಿಕ ಬಣ್ಣವನ್ನು ಕಲಬೆರಕೆ ಎಂದು ಗುರುತಿಸಬೇಕು.
BREAKING : 2025ರ ‘WPL’ ವೇಳಾಪಟ್ಟಿ ಪ್ರಕಟ ; ಫೆ.21ರಂದು ಬೆಂಗಳೂರಲ್ಲಿ ಮೊದಲ ಪಂದ್ಯ |WPL 2025
BREAKING : ನಟ ‘ಸೈಫ್ ಅಲಿ ಖಾನ್’ ಮೇಲೆ ದಾಳಿ ಕುರಿತು ಮೌನ ಮುರಿದ ‘ಕರೀನಾ ಕಪೂರ್’ ; ಹೇಳಿದ್ದೇನು ಗೊತ್ತಾ?
BREAKING : 2025ರ ‘WPL’ ವೇಳಾಪಟ್ಟಿ ಪ್ರಕಟ ; ಫೆ.21ರಂದು ಬೆಂಗಳೂರಲ್ಲಿ ಮೊದಲ ಪಂದ್ಯ |WPL 2025