ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕಾಯುತ್ತಿರುವ 8 ನೇ ವೇತನ ಆಯೋಗ ರಚನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಪ್ರಕಟಿಸಿದ್ದಾರೆ.
#WATCH | Delhi: Union Minister Ashwini Vaishnaw says, "Prime Minister has approved the 8th Central Pay Commission for all employees of Central Government…" pic.twitter.com/lrVUD25hFu
— ANI (@ANI) January 16, 2025
ನೌಕರರ ವೇತನ ಮತ್ತು ನಿವೃತ್ತರಿಗೆ ಪಾವತಿಸುವ ಪಿಂಚಣಿಗಳ ಪರಿಷ್ಕರಣೆಗೆ ಫಿಟ್ಮೆಂಟ್ ಅಂಶ ಮತ್ತು ಇತರ ವಿಧಾನಗಳನ್ನು ಶಿಫಾರಸು ಮಾಡಲು ಪ್ರತಿ 10 ವರ್ಷಗಳಿಗೊಮ್ಮೆ ವೇತನ ಆಯೋಗಗಳನ್ನು ರಚಿಸಲಾಗುತ್ತದೆ.
2014ರ ಫೆಬ್ರವರಿಯಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ 7ನೇ ವೇತನ ಆಯೋಗವನ್ನು ರಚಿಸಿತ್ತು. ಇದರ ಶಿಫಾರಸುಗಳನ್ನು ಸರ್ಕಾರವು ಜನವರಿ ೨೦೧೬ ರಿಂದ ಜಾರಿಗೆ ತಂದಿತು.
ಜನವರಿ 2026 ರಿಂದ ವೇತನವನ್ನು ಪರಿಷ್ಕರಿಸಲು 8 ನೇ ವೇತನ ಆಯೋಗವನ್ನು ಶೀಘ್ರವಾಗಿ ರಚಿಸಬೇಕೆಂದು ಒತ್ತಾಯಿಸುತ್ತಿರುವ ನೌಕರರ ಸಂಘಗಳು ಮತ್ತು ಸಿಬ್ಬಂದಿ ಸಂಘಗಳ ನಿರಂತರ ಬೇಡಿಕೆಗಳ ಮಧ್ಯೆ ವೈಷ್ಣವ್ ಅವರ ಪ್ರಕಟಣೆ ಬಂದಿದೆ.
2024-25ನೇ ಸಾಲಿನ ‘GDP’ ಬೆಳವಣಿಗೆ ದರ ಶೇ.6.4ಕ್ಕೆ ಏರಿಕೆ : ‘FICCI’ ಆರ್ಥಿಕ ಮುನ್ನೋಟ ಸಮೀಕ್ಷೆ