ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ರೌಡಿಶೀಟರ್ ಗಣಿ ಅಲಿಯಾಸ್ ಜಲಕ್ ನನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಬಾಗಲೂರಿನ ಅಪಾರ್ಟ್ ಮೆಂಟ್ ನಲ್ಲಿ ಗಣಿ ಅಲಿಯಾಸ್ ಜಲಕ್ ನನ್ನು ರೌಡಿಶೀಟರ್ ಬ್ರಿಜೇಶ್ ಎಂಬಾತ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬ್ರೀಜೇಶ್ ಕಂಟ್ರಿಮೇಟ್ ಪಿಸ್ತೂಲ್ ನಿಂದ 2 ಸುತ್ತು ಗುಂಡು ಹಾರಿಸಿ ಜಲಕ್ ಹತ್ಯೆ ಮಾಡಲಾಗಿದ್ದು, ಬಳಿಕ ಯುವಕರನ್ನು ಕರೆಸಿಕೊಂಡು ಶವ ಸಾಗಿಸಿ ತಮಿಳುನಾಡಿನ ನಿರ್ಜನ ಪ್ರದೇಶದಲ್ಲಿ ಶವ ಸುಟ್ಟುಹಾಕಿದ್ದ.
ಸಂಪಿಗೆಯಳ್ಳಿಯಲ್ಲಿ ಗಣಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಇದೀಗ ರೌಡಿಶೀಟರ್ ಬ್ರಿಜೇಶ್ ಕೊಲೆ ಮಾಡಿರುವುದು ತಿಳಿದು ಬಂದಿದೆ.