ಬಳ್ಳಾರಿ : ಬಳ್ಳಾರಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಮಂಜುನಾಥ್ ಬಲಗಾಲಿಗೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಡೆದಿದೆ.
5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೋರಣಗಲ್ ನಲ್ಲಿ ಸ್ಥಳ ಮಹಜರಿಗೆ ಹೋಗಿದ್ದ ವೇಳೆ ಪಿಸಿ ರಘು ಮೇಲೆ ಹಲ್ಲೆ ಮಾಡಿ ಆರೋಪಿ ಮಂಜುನಾಥ್ ಪರಾರಿಯಾಗಲು ಯತ್ನಿಸಿದ್ದ ಈ ವೇಳೆ ಆತ್ಮರಕ್ಷಣೆಗಾಗಿ ತೋರಣಗಲ್ ಇನ್ಸ್ ಪೆಕ್ಟರ್ ಡಾಕೇಶ್ ಅವರು ಆರೋಪಿ ಮಂಜುನಾಥ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿ ಮಂಜುನಾಥ್ ಹಾಗೂ ಪಿಸಿ ರಘು ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಳ್ಳಾರಿಯ ತೋರಣಗಲ್ ನ ಖಾಸಗಿ ಕಾರ್ಖಾನೆಯೊಂದರಲ್ಲಿ ಉತ್ತರ ಭಾರತದ ದಂಪತಿಗಳು ಕೆಲಸ ಮಾಡುತ್ತಿದ್ದರು. ಇವರಿಗೆ 5 ವರ್ಷದ ಪುತ್ರಿ ಇದ್ದರು. ಆಕೆಯನ್ನು ಪುಸಲಾಯಿಸಿ ಕರೆದೊಯ್ದಿರುವಂತ ಬಿಹಾರ ಮೂಲದ ವ್ಯಕ್ತಿಯೊಬ್ಬ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಅತ್ಯಾಚಾರದಿಂದಾಗಿ ನಿತ್ರಾಣಗೊಂಡಿದ್ದಂತ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಹೀಗಾಗಿ ಬಾಲಕಿ ಪ್ರಾಣಾಯಪಾಯದಿದಂ ಪಾರಾಗಿದ್ದಾಳೆ. ಬಳ್ಳಾರಿಯ ಸರ್ಕಾರಿ ಆರೋಗ್ಯ ಸಂಸ್ಥೆಯ ವೈದ್ಯರು 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದನ್ನು ಖಚಿತ ಪಡಿಸಿದ್ದಾರೆ.