ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಾಜಕೀಯದಲ್ಲಾಗಲೀ, ಇಂಟರ್‌ನೆಟ್’ನಲ್ಲಾಗಲೀ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳ ಸಂಖ್ಯೆ ಅಷ್ಟಿಷ್ಟಲ್ಲ. ರಾಜಕೀಯದಲ್ಲಿ ಸದಾ ಸಕ್ರಿಯರಾಗಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಒಂದೇ ಒಂದು ಪೋಸ್ಟ್ ಹಾಕಿದ್ರು ಕೋಟಿಗಟ್ಟಲೆ ಲೈಕ್, ಶೇರ್, ಕಾಮೆಂಟ್’ಗಳು ಬರುತ್ತವೆ. ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ವಿಶ್ವಾದ್ಯಂತ ಯೂಟ್ಯೂಬ್’ನಲ್ಲಿ 20 ಮಿಲಿಯನ್’ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿರುವ ಪ್ರಧಾನಿ ಮೋದಿ ಅಗ್ರ ರಾಜಕೀಯ ನಾಯಕರಾಗಿದ್ದಾರೆ. ಅವರು ಅಧಿಕೃತ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಅವರ ಎಲ್ಲಾ ಅಧಿಕೃತ ಕಾರ್ಯಕ್ರಮಗಳು ಮತ್ತು ಸಂದರ್ಶನಗಳು ಇದರಲ್ಲಿ ಪ್ರಸಾರವಾಗುತ್ತವೆ. ಇನ್ನು ಈ ಚಾನಲ್ ಎಷ್ಟು ಚಂದಾದಾರರನ್ನ ಹೊಂದಿದೆ.? ಎಷ್ಟು ಆದಾಯ ಬರುತ್ತದೆ ಎಂದು ತಿಳಿದರೆ ಶಾಕ್ ಆಗುತ್ತೀರಿ.
ಪ್ರಧಾನಿ ಮೋದಿ ಅವರು ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ ಖಾತೆಗಳನ್ನ ಹೊಂದಿದ್ದಾರೆ. ಅವರು ಅಧಿಕೃತ ಯೂಟ್ಯೂಬ್ ಚಾನೆಲ್ ಸಹ ಹೊಂದಿದ್ದಾರೆ. ಈ ಚಾನೆಲ್’ನ್ನ ಅಕ್ಟೋಬರ್ 26, 2007 ರಂದು ಪ್ರಾರಂಭಿಸಲಾಯಿತು. ಈ ಚಾನೆಲ್ 26 ಮಿಲಿಯನ್ ಚಂದಾದಾರರನ್ನ ಹೊಂದಿದೆ. ಈವರೆಗೆ 29,272 ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು 636 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವರದಿಯ ಪ್ರಕಾರ, ಪ್ರಧಾನಿ ಮೋದಿ ಈ ಚಾನೆಲ್ ಮೂಲಕ ತಿಂಗಳಿಗೆ 1.62 ಕೋಟಿಯಿಂದ 4.88 ಕೋಟಿ ರೂಪಾಯಿವರೆಗೆ ಗಳಿಸ್ತಾರಂತೆ.
BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಬೆಳಗಾವಿಯಲ್ಲಿ ಇಬ್ಬರು ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ!
Good News : EPF ಖಾತೆದಾರರಿಗೆ ಸಿಹಿ ಸುದ್ದಿ : ಶೀಘ್ರ 7,500 ರೂ.ಗೆ ‘ಪಿಂಚಣಿ’ ಹೆಚ್ಚಳ