ಕಲಬುರ್ಗಿ: ಚೆಕ್ ಬುಕ್ ನಲ್ಲಿ ಕಲಬುರ್ಗಿ ಆಯುಕ್ತರ ನಕಲಿ ಸಹಿ ಮಾಡಿ, ಬ್ಯಾಂಕ್ ಗೆ ನೀಡಿ ಲಕ್ಷ ಲಕ್ಷ ಹಣ ಡ್ರಾ ಮಾಡಿಕೊಂಡ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವ ಮೂಲಕ, ಅಕ್ರಮಕ್ಕೆ ಬ್ರೇಕ್ ಹಾಕಿದ್ದಾರೆ.
ಕಲಬುರ್ಗಿಯ ಆಯುಕ್ತರಿಗೆ ಸೇರಿದಂತ ಚೆಕ್ ಬುಕ್ ನಲ್ಲಿ ನಕಲಿ ಸಹಿ ಮಾಡಿ ಮೂರು ಚೆಕ್ ಗಳಲ್ಲಿ ಒಟ್ಟು 1 ಕೋಟಿ 30 ಲಕ್ಷ ಹಣ ಡ್ರಾಮಾಡೋದಕ್ಕೆ ಐವರು ಆರೋಪಿಗಳು ಸೇರಿಕೊಂಡು ಪ್ರಯತ್ನಿಸಿದ್ದರು.
ಮೊದಲ ಹಂತದಲ್ಲಿ ಮೊದಲ ಚೆಕ್ ನಲ್ಲಿ ಬರೋಬ್ಬರಿ 35,56,640 ಹಣವನ್ನು ನಕಲಿ ಸಹಿಯೊಂದಿಗೆ ಡ್ರಾಮಾಡಿಕೊಂಡಿದ್ದರು. ಇದಲ್ಲದೇ ಇನ್ನೂ ಎರಡು ಚೆಕ್ ಗಳನ್ನು ನೀಡಿ ಹಣ ಡ್ರಾಮಾಡೋದಕ್ಕೆ ಮುಂದಾಗಿದ್ದರು. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಅನುಮಾನಗೊಂಡು ಕಲಬುರ್ಗಿ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದರು.
ಕೂಡಲೇ ಅಲರ್ಟ್ ಆದಂತೆ ಕಲಬುರ್ಗಿ ಪಾಲಿಕೆ ಆಯುಕ್ತರು ಬ್ರಹ್ಮಪುರು ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದರು. ಆಯುಕ್ತರ ದೂರು ಆಧರಿಸಿ ಕಾರ್ಯಾಚರಣೆಗೆ ಇಳಿದಂತ ಪೊಲೀಸರು ಮಿರ್ಜಾ ಬೇಗ್, ನಾಸೀರ್ ಅಹ್ಮದ್, ಮೊಹಮ್ಮದ್ ರೆಹಮಾನ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೂ ಬಂಧಿತ ಆರೋಪಿಗಳಿಂದ 30 ಲಕ್ಷವನ್ನು ಜಪ್ತಿ ಮಾಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.
ಬೆಂಗಳೂರು ಜನತೆ ಗಮನಕ್ಕೆ: ಜ.16ರ ನಾಳೆ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut