ಕುಂಭಮೇಳ ಜಗತ್ತಿನಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮೇಳವಾಗಿದೆ. ಕುಂಭ ಎಂದರೆ ಮಡಕೆ ಎಂದು ಅರ್ಥ. ಸಮುದ್ರ ಮಂಥನದ ಸಮಯದಲ್ಲಿ ನಾಲ್ಕು ಹನಿ ಅಮೃತವು ನಾಲ್ಕು ಪವಿತ್ರ ತೀರ್ಥ ಕ್ಷೇತ್ರದಲ್ಲಿ ಬಿದ್ದವು ಎಂಬ ಪ್ರತೀತಿ ಇದೆ.
ಆ ಪವಿತ್ರ ತೀರ್ಥ ಕ್ಷೇತ್ರಗಳು ಯಾವುವು ಎಂದರೆ:
1. ಹರಿದ್ವಾರದಲ್ಲಿ ಹರಿಯುವ ಗಂಗಾ ನದಿ.
2. ಗಂಗಾ, ಯಮುನಾ ಮತ್ತು ಸರಸ್ವತಿ ಸೇರುವ ಪ್ರಯಾಗರಾಜ್.
3. ಮಧ್ಯಪ್ರದೇಶದ ಉಜ್ಜೈನಿಯ ಕ್ಷಿಪ್ರ ನದಿ
4. ನಾಸಿಕದಲ್ಲಿರುವ ಗೋದಾವರಿ ನದಿ.
ಒಟ್ಟು ಭಾರತದಲ್ಲಿ ನಾಲ್ಕು ರೀತಿಯ ಕುಂಭಮೇಳ ನಡೆಯುತ್ತದೆ:
1. ಕುಂಭ ಮೇಳ (4 ವರ್ಷಗಳಿಗೊಮ್ಮೆ ಹರಿದ್ವಾರ, ಪ್ರಯಾಗ್ ರಾಜ್, ಉಜ್ಜೈನ್ ಹಾಗೂ ನಾಸಿಕ್).
2. ಅರ್ಧ ಕುಂಭ ಮೇಳ (6 ವರ್ಷಗಳಿಗೊಮ್ಮೆ ಪ್ರಯಾಗ್ ರಾಜ್ ಮತ್ತು ಹರಿದ್ವಾರ್)
3. ಪೂರ್ಣ ಕುಂಭ ಮೇಳ (12 ವರ್ಷಗಳಿಗೊಮ್ಮೆ ಪ್ರಯಾಗ್ ರಾಜ್)
4. ಮಹಾಕುಂಭ ಮೇಳ (144 ವರ್ಷಗಳಿಗೊಮ್ಮೆ ಪ್ರಯಾಗ್‌ರಾಜ್)
ಈ ಬಾರಿಯ ಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದ್ದು 13 ಜನವರಿ 2025ರ ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾಗಲಿದ್ದು 26 ಫೆಬ್ರವರಿ 2025 ರ ಮಹಾ ಶಿವರಾತ್ರಿಯಂದು ಮುಕ್ತಾಯವಾಗಲಿದೆ.
ಕುಂಭ ಮೇಳೆ ನಡೆಯುವ ಸಂಧರ್ಭದಲ್ಲಿ ನಾಗಾ ಸಾಧುಗಳು ಆಗಮಿಸಿ ಶಾಹಿ ಸ್ನಾನದಲ್ಲಿ ಪಾಲ್ಗೊಳ್ಳುತ್ತಾರೆ.
ಈ ಬಾರಿ ಶಾಹಿ ಸ್ನಾನ ನಡೆಯುವ ದಿನಗಳು ಈ ಕೆಳಗಿನಂತಿವೆ:
ಜನವರಿ 13( ಪುಷ್ಯ ಪೂರ್ಣಿಮಾ ಸ್ನಾನ)
ಜನವರಿ 15 (ಮಕರ ಸಂಕ್ರಾಂತಿ ಸ್ನಾನ)
ಜನವರಿ 29(ಮೌನಿ ಅಮಾವಾಸ್ಯೆ ಸ್ನಾನ)
ಫೆಬ್ರುವರಿ 03(ಬಸಂತ್ ಪಂಚಮಿ ಸ್ನಾನ)
ಫೆಬ್ರುವರಿ 12(ಮಾಘಿ ಹುಣ್ಣಿಮೆ ಸ್ನಾನ)
ಫೆಬ್ರುವರಿ 26(ಮಹಾ ಶಿವರಾತ್ರಿ ಸ್ನಾನ)
ಈ ಬಾರಿಯ ಮಹಾ ಕುಂಭಮೇಳದಲ್ಲಿ ಸುಮಾರು 45 ಕೋಟಿಗೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಮಹಾಕುಂಭ ಮೇಳದಲ್ಲಿ ಭಾಗವಹಿಸುವ ನಾಗ ಸಾಧುಗಳ ಜೀವನವು ಸಾಮಾನ್ಯ ಜನರಿಂದ ಪ್ರತ್ಯೇಕವಾಗುವುದರೊಂದಿಗೆ ನಿಗೂಢವಾಗಿರುತ್ತದೆ. ಲೌಕಿಕ ಭೋಗಗಳಿಂದ ದೂರವಿದ್ದು ದೇವರ ಆರಾಧನೆಯಲ್ಲಿ ಆಳವಾಗಿ ತಲ್ಲೀನರಾಗುವ ಈ ಸಾಧುಗಳಲ್ಲಿ 13 ಅಖಾಡಗಳಿವೆ(ಪಂಗಡ), ಅದರಲ್ಲಿ ಏಳು ಶೈವ(ಶಿವನ ಆರಾಧಕರು) ಮತ್ತು ತಲಾ ಮೂರು ವೈಷ್ಣವ(ವಿಷ್ಣುವಿನ ಆರಾಧಕರು) ಹಾಗೂ ಉದಾಸೀನ(ಸಿಖ್) ಅಖಾಡಗಳಿವೆ. ಆಧ್ಯಾತ್ಮಿಕ ಮತ್ತು ರಕ್ಷಣಾತ್ಮಕ ಕೆಲಸಗಳೆರಡನ್ನೂ ಅಖಾಡದ ಸಾಧುಗಳು ನಿರ್ವಹಿಸುತ್ತಾರೆ.
ಸನಾತನ ಜೀವನ ವಿಧಾನವನ್ನು ಸಂರಕ್ಷಿಸಲು ಜಗದ್ಗುರು ಆದಿ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಈ ಅಖಾಡಗಳನ್ನು ಸ್ಥಾಪಿಸಿದರು.