ನವದೆಹಲಿ: ಕರ್ನಾಟಕದ ಮೂರು ರೈಲ್ವೆ ಮೇಲ್ಸೇತುವೆಗಳಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಈ ಮೂಲಕ ಜನರ ಸಮಸ್ಯೆಗೆ ಪ್ರತಿಸ್ಪಂದಿಸಿದೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರು, ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳು ಮಂಜೂರಾಗಿವೆ. ರೈಲ್ವೆ ಸಚಿವಾಲಯದಿಂದ ಸೇತುವೆಗಳನ್ನು ಮಂಜೂರು ಮಾಡಿರುವುದಾಗಿ ತಿಳಿಸಿದ್ದಾರೆ.
ಹೊಳೆನರಸೀಪುರದ ಅಕ್ಕಿಹೆಬ್ಬಾಳು–ಮಂಡಗೆರೆ, ಮಂಡಗೆರೆ–ಹೊಳೆನರಸೀಪುರ ಮತ್ತು ಕಡೂರು ಜಂಕ್ಷನ್–ಬಿರೂರು ಜಂಕ್ಷನ್ ನಡುವೆ ಮೇಲ್ಸೇತುವೆ ನಿರ್ಮಾಣವಾಗಲಿದ್ದಾವೆ ಅಂತ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ಯೋಜನೆಗಳಿಗೆ ವಿಶೇಷ ರೈಲ್ವೆ ಯೋಜನೆಗಳು ಅಂತ ಪರಿಗಣಿಸಿ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿರುವುದಾಗಿ ತಿಳಿಸಿದ್ದಾರೆ.
BREAKING : 11 ಮಂದಿ `DYSP’ (ಸಿವಿಲ್) ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ | DYSP Transfer