ಗುವಾಹಟಿ : ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಮೂವರು ಕಾರ್ಮಿಕರ ಮೃತದೇಹಗಳನ್ನ ಇಂದು ಹೊರತೆಗೆಯಲಾಗಿದೆ. ಇದಾದ ಬಳಿಕ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಸೋಮವಾರ ಇದ್ದಕ್ಕಿದ್ದಂತೆ ನೀರು ತುಂಬಿದ ನಂತರ ಗಣಿಯಲ್ಲಿ ಸಿಕ್ಕಿಬಿದ್ದ ಒಂಬತ್ತು ಕಾರ್ಮಿಕರಲ್ಲಿ ನಾಲ್ವರು ಮೃತ ಪಟ್ಟಿದ್ದಾರೆ. ಬುಧವಾರ ಮುಂಜಾನೆ, ಉಮ್ರಾಂಗ್ಸು ಗಣಿಯಿಂದ ಕಾರ್ಮಿಕನ ಶವವನ್ನ ಹೊರತೆಗೆಯಲಾಯಿತು.
ಗಣಿಯಿಂದ ಹೊರತೆಗೆದ ಮೂವರು ಕಾರ್ಮಿಕರಲ್ಲಿ ಒಬ್ಬನನ್ನು ದಿಮಾ ಹಸಾವೊ ನಿವಾಸಿ 27 ವರ್ಷದ ಲಿಜೆನ್ ಮಗರ್ ಎಂದು ಗುರುತಿಸಲಾಗಿದೆ. ಇನ್ನೆರಡು ಮೃತದೇಹಗಳನ್ನು ಗುರುತಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BIG NEWS : ಮಹಿಳಾ ಜಡ್ಜ್ ಮುಂದೆ ಮಾತ್ರ ‘164’ ಹೇಳಿಕೆ ದಾಖಲಿಸುತ್ತೇನೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್