ಬೆಂಗಳೂರು : ಬೆಂಗಳೂರಿನಲ್ಲಿ ಯುವಕನೊಬ್ಬ ಕೈ ಕುಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕನ ಪ್ರಾಣ ಉಳಿಸಿದ್ದಾರೆ.
ಹೌದು, ಕೇರಳ ಮೂಲದ ಯುವಕ ಜಿತಿನ್ ಎಂಬ ಯುವಕ ಬೆಂಗಳೂರಿನ ಪಿಜಿಯೊಂದರಲ್ಲಿ ನೆಲೆಸಿದ್ದನು. ಪಿಜಿಯಲ್ಲಿ ಕೈ ಕುಯ್ದುಕೊಂಡು ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ, ಅದೃಷ್ಟವಶಾತ್ ಸರಿಯಾದ ಸಮಯಕ್ಕೆ ಪೊಲೀಸರು ಬಂದ ಹಿನ್ನೆಲೆ ಯುವಕನ ಪ್ರಾಣ ಉಳಿದಿದೆ. ಜಿತಿನ್ ಸಾಕಷ್ಟು ಕೌಟುಂಬಿಕ ಸಮಸ್ಯೆಗಳಿಂದ ಮನ ನೊಂದಿದ್ದನು. ತಂದೆಗೆ ಕ್ಯಾನ್ಸರ್ ಇತ್ತು, ಅಲ್ಲದೇ ಈತ ತನ್ನ ಪ್ರಿಯತಮೆ ಜೊತೆ ಜಗಳ ಕೂಡ ಮಾಡಿದ್ದನು. ಈ ಎಲ್ಲಾ ವಿಚಾರಕ್ಕೆ ಬೇಸತ್ತ ಜಿತಿನ್ ಮದ್ಯ ಸೇವಿಸಿ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಲ್ಲೇ ಬೀಟ್ ನಲ್ಲಿದ್ದ ಪೊಲೀಸರು ವಿಚಾರ ತಿಳಿದು ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಯುವಕನ ಪ್ರಾಣ ಉಳಿಸಿದ್ದಾರೆ. ಘಟನೆ ಸಂಬಂಧ ಮಾದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.