ಮಂಡ್ಯ: ಜಿಲ್ಲೆಯ ಮದ್ದೂರು ಠಾಣೆಯ ಇಬ್ಬರು ಪೊಲೀಸರನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ಠಾಣೆಯಲ್ಲಿ ಜಮೀನು ಗಲಾಟೆ ಸಂಬಂಧ ದೂರು ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಎದುರುದಾರರಿಗೆ ಸಮನ್ಸ್ ಮತ್ತು ವಾರೆಂಟ್ ಜಾರಿ ಮಾಡದೇ ಹೆಡ್ ಕಾನ್ಸ್ ಸ್ಟೇಬಲ್ ರವಿ ಹಾಗೂ ಕಾನ್ಸ್ ಸ್ಟೇಬಲ್ ವಿಷ್ಣುವರ್ಧನ್ ಕರ್ತವ್ಯ ಲೋಪವೆಸಗಿದ್ದರು. ಇವರ ವಿರುದ್ಧ ದೂರುದಾರರ ಜೊತೆಗೆ ಶಾಮೀಲಾಗಿ ಸಮನ್ಸ್, ವಾರೆಂಟ್ ಜಾರಿಗೊಳಿಸದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದಾಗಿ ದೂರು ನೀಡಲಾಗಿ್ತತು.
ಈ ದೂರು ಆಧರಿಸಿ ತನಿಖೆ ನಡೆಸಲಾಗಿತ್ತು. ಈ ವೇಳೆ ಸಮನ್ಸ್, ವಾರೆಂಟ್ ಜಾರಿ ಮಾಡದಿದ್ದರೂ ಕೋರ್ಟ್ ಗೆ ಸುಳ್ಳು ವರದಿಯನ್ನು ಇಬ್ಬರು ಪೊಲೀಸ್ ಸಿಬ್ಬಂದಿ ನೀಡಿರುವುದು ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಜಮೀನು ಗಲಾಟೆ ಸಂಬಂಧ ಕರ್ತವ್ಯ ಲೋಪ ಎಸಗಿದ್ದಂತ ಮದ್ದೂರು ಠಾಣೆಯ ಹೆಚ್ ಸಿ ರವಿ ಹಾಗೂ ಪಿಸಿ ವಿಷ್ಣುವರ್ಧನ್ ಎಂಬುವರನ್ನು ಸಸ್ಪೆಂಡ್ ಮಾಡಲಾಗಿದೆ. ಈ ಸಂಬಂಧ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜನ ಬಾಲದಂಡಿ ಅಮಾನತುಗೊಳಿಸಿ ಆದೇಶಿಸಿದ್ದಾರೆ.
Good News: ಇನ್ಮುಂದೆ ‘ನಮ್ಮ ಮೆಟ್ರೋ ರೈಲು’ ಸಂಚಾರ ಸೋಮವಾರದಂದು ಮುಂಜಾನೆ 4.15ಕ್ಕೆ ಆರಂಭ | Namma Metro
Electricity Bill: 2 ಬಿಲಿಯನ್ ರೂಪಾಯಿ ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ವ್ಯಕ್ತಿ!