ಬೆಂಗಳೂರು: ನಗರದ ನಮ್ಮ ಮೆಟ್ರೋ ( Namma Metro Train ) ಪ್ರಯಾಣಿಕರಿಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ಸೋಮವಾರದಂದು ಮಾತ್ರ ಮೆಟ್ರೋ ಸೇವೆ ಮುಂಜಾನೆ 4.15 ಕ್ಕೆ ಆರಂಭಗೊಳ್ಳಲಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬಿಎಂಆರ್ ಸಿಎಲ್, ಬೆಂಗಳೂರು ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸುವ ಸಲುವಾಗಿ, ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರದಂದು ಮಾತ್ರ ಮೆಟ್ರೋ ಸೇವೆಯನ್ನು ದಿನಾಂಕ 13ನೇ ಜನವರಿ 2025 ರಿಂದ ಜಾರಿಗೆ ಬರುವಂತೆ ಈಗಿರುವ ಮುಂಜಾನೆ 05:00ಕ್ಕೆ ಬದಲಾಗಿ 04:15 ರಿಂದ ಪ್ರಾರಂಭಿಸಲಿದೆ ಎಂದಿದೆ.
ಇನ್ನೂ ಮತ್ತೆಲ್ಲಾ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸಾರ್ವಜನಿಕರು ತಮ್ಮ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೋರಿದೆ.
Electricity Bill: 2 ಬಿಲಿಯನ್ ರೂಪಾಯಿ ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ವ್ಯಕ್ತಿ!
BIG NEWS: ರಾಜ್ಯ ಸರ್ಕಾರದಿಂದ ಬಿಯರ್ ಪ್ರಿಯರಿಗೆ ಶಾಕ್: ಜ.20ರಿಂದಲೇ ದರ ಏರಿಕೆ ಫಿಕ್ಸ್?