ಬೆಂಗಳೂರು: ನಗರದ ಸೌತ್ ಎಂಡ್ ಸರ್ಕಲ್ ಬಳಿಯಲ್ಲಿರುವಂತ ಬಿಬಿಎಂಪಿ ಕಚೇರಿಗೆ ಇಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ದಿಢೀರ್ ಭೇಟಿಯ ವೇಳೆಯಲ್ಲಿ ಬಹುದೊಡ್ಡ ಕರ್ಮಕಾಂಡವೇ ಬಯಲಾಗಿದೆ. ನಿಯಮ ಉಲ್ಲಂಘಿಸಿ ಅಮ್ಮನ ಬದಲು ಮಗ ಕೆಲಸಕ್ಕೆ ಬಂದಿರುವಂತ ವಿಚಾರ ತಿಳಿದು ಬಂದಿದೆ.
ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿರುವಂತ ಬಿಬಿಎಂಪಿ ಕಚೇರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ದಿಢೀರ್ ಭೇಟಿ ನೀಡಿದರು. ಈ ವೇಳೆಯಲ್ಲಿ ಕೇಸ್ ವರ್ಕರ್ ಕವಿತಾ ಬದಲಾಗಿ ಮಗ ನವೀನ್ ಎಂಬಾತ ಕೆಲಸ ಮಾಡುತ್ತಿರೋದು ಗಮನಕ್ಕೆ ಬಂದಿದೆ.
ಕಚೇರಿಗೆ ದಿಢೀರ್ ಭೇಟಿಯ ಸಂದರ್ಭದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ನೀನ್ಯಾರು ಅಂತ ನವೀನ್ ಪ್ರಶ್ನಿಸಿದ್ದಾರೆ. ಈ ವೇಳೆಯಲ್ಲಿ ತಾನು ಕೇಸ್ ವರ್ಕರ್ ಕವಿತಾ ಅವರ ಪುತ್ರ ಎಂಬುದಾಗಿ ನವೀನ್ ತಿಳಿಸಿದ್ದಾನೆ. ನಿಮ್ಮ ಅಮ್ಮ ಎಲ್ಲಿ ಅಂದಾಗ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ ಅಂತ ಉತ್ತರಿಸಿದ್ದಾನೆ.
ಕೂಡಲೇ ಸ್ಥಳದಲ್ಲೇ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಬಿಬಿಎಂಪಿ ಕೇಸ್ ವರ್ಕರ್ ಕವಿತಾಗೆ ಕರೆ ಮಾಡು ಅಂತ ಪುತ್ರನಿಗೆ ಸೂಚಿಸಿದ್ದಾರೆ. ತಾಯಿಗೆ ಮಗನಿಂದಲೇ ಕರೆ ಮಾಡಿಸಿದಾಗ ತಾನು ತಿಥಿ ಕಾರ್ಯದಲ್ಲಿ ಇರೋದಾಗಿ ತಿಳಿಸಿದ್ದಾರೆ.
ಇನ್ನೂ ಕೇಸ್ ವರ್ಕರ್ ಕವಿತಾ ಬದಲಾಗಿ ಮಗ ನವೀನ್ ಕೆಲಸಕ್ಕೆ ಬರುತ್ತಿರೋದಲ್ಲದೇ, ಮಗನ ಜೊತೆ ಸಹಾಯಕ್ಕೆ ಗೀತಾ ಎಂಬುವರನ್ನು ನೇಮಕ ಮಾಡಿಕೊಂಡಿರುವಂತ ವಿಚಾರವು ಬೆಳಕಿಗೆ ಬಂದಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರ ಪ್ರಶ್ನೆಗಳಿಂದ ಗಲಿಬಿಲಿಗೊಂಡ ಕೇಸ್ ವರ್ಕರ್ ಕವಿತಾ ಅವರ ಪುತ್ರ ನವೀನ್ ತಾನು ಜನರಿಗೆ ಸಹಾಯ ಮಾಡಲು ಬಂದಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಆಗ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಸ್ಥಳದಲ್ಲೇ ನವೀನ್ ಗೆ ಪುಲ್ ಕ್ಲಾಸ್ ತೆಗೆದುಕೊಂಡ ಘಟನೆಯೂ ನಡೆದು, ಬಿಬಿಎಂಪಿ ಕಚೇರಿಯಲ್ಲಿನ ಬಹುದೊಡ್ಡ ಕರ್ಮಕಾಂಡ ಬಯಲಾಗಿದೆ.
Electricity Bill: 2 ಬಿಲಿಯನ್ ರೂಪಾಯಿ ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ವ್ಯಕ್ತಿ!
BIG NEWS: ರಾಜ್ಯ ಸರ್ಕಾರದಿಂದ ಬಿಯರ್ ಪ್ರಿಯರಿಗೆ ಶಾಕ್: ಜ.20ರಿಂದಲೇ ದರ ಏರಿಕೆ ಫಿಕ್ಸ್?