ಬೆಂಗಳೂರು: ನಗರದ ಬಿಬಿಎಂಪಿ ಕಚೇರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ದಿಢೀರ್ ಭೇಟಿ ನೀಡಿ, ಆಫೀಸಿನಲ್ಲಿ ಇಲ್ಲದಂತ ಸಿಬ್ಬಂದಿಗಳಿಗೆ ಚಳಿ ಬಿಡಿಸಿದಂತ ಘಟನೆ ಇಂದು ನಡೆದಿದೆ.
ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ಬಿಬಿಎಂಪಿ ಕಚೇರಿಗೆ ದಿಢೀರ್ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಭೇಟಿ ನೀಡಿದರು. ಅವರು ಭೇಟಿ ನೀಡಿದಂತ ಸಂದರ್ಭದಲ್ಲಿ ಕಚೇರಿಯಲ್ಲಿ ಯಾರು ಇರದೇ ಇದ್ದದ್ದು ಕಂಡು ಕೆಂಡಾಮಂಡಲರಾದರು.
ಕಚೇರಿಯಲ್ಲೇ ಇದ್ದಂತ ಸಿಬ್ಬಂದಿಯೊಬ್ಬರು ವೈಕುಂಠ ಏಕಾದಶಿ ಪ್ರಯುಕ್ತ ದೇವಸ್ಥಾನಕ್ಕೆ ಅಧಿಕಾರಿ, ಸಿಬ್ಬಂದಿಗಳು ತೆರಳಿರುವಂತ ಮಾಹಿತಿ ನೀಡಿದರು. ಇದರಿಂದ ಕೋಪಗೊಂಡಂತ ಅವರು ಅಧಿಕಾರಿಗಳು ದೇಗುಲಕ್ಕೆ ಹೋದ್ರೆ ಇಲ್ಲಿ ಕೆಲಸ ಮಾಡೋರು ಯಾರು ಅಂತ ಪ್ರಶ್ನಿಸಿದರು. ಅಲ್ಲದೇ ಸ್ಥಳದಲ್ಲಿದ್ದಂತ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನ ಜನತೆಗೆ ಗಮನಕ್ಕೆ: ಜ.13ರಂದು ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut