ಬೆಂಗಳೂರು : ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ದಕ್ಷಿಣ ಭಾರತದಲ್ಲಿ ಮೊದಲ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳನ್ನು (IRDLs) ಸ್ಥಾಪಿಸಲು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು (BMC&RI) ಆಯ್ಕೆ ಮಾಡಿದೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಈ ರೀತಿಯ ಕೇಂದ್ರ ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಇದರಿಂದ ರಾಜ್ಯದಲ್ಲಿ ಸಂಶೋಧನೆ ಕ್ಷೇತ್ರಕ್ಕೆ ನೆರವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಯೋಗಾಲಯದ ಪ್ರಯೋಜನಗಳು
ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳ ವೈದ್ಯಕೀಯ ಕಾಲೇಜುಗಳಲ್ಲಿ ಸಾಂಕ್ರಾಮಿಕ ರೋಗ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳನ್ನು (IRDLs) ಸ್ಥಾಪಿಸಲು ಮುಂದಾಗಿದೆ. ಬ್ಯಾಕ್ಟೀರಿಯಾಲಜಿ, ಮೈಕಾಲಜಿ ಮತ್ತು ಪ್ಯಾರಾಸಿಟಾಲಜಿಗೆ ಸಂಬಂಧಿಸಿದಂತೆ ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳಿಗೆ (VRDLs) ಆದ್ಯತೆ ನೀಡಲಾಗುತ್ತಿದೆ.
ರೋಗ ನಿರ್ಣಯದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಇದರಿಂದ ಸಾಧ್ಯವಾಗಲಿದೆ, ಈ ನಿಟ್ಟಿನಲ್ಲಿ ನಮ್ಮಲಿನ ಸಾಮರ್ಥ್ಯಗಳನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಲಾಗಿದೆ.
ಮೂರು ನಿರ್ಣಾಯಕ ಕ್ಷೇತ್ರಗಳು
IRDL ಯೋಜನೆಯಡಿಯಲ್ಲಿ ಸಾಮರ್ಥ್ಯಗಳ ಅಭಿವೃದ್ಧಿಗೆ ಈ ಮೂರು ನಿರ್ಣಾಯಕ ಕ್ಷೇತ್ರಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗುವುದು.
1. ಬ್ಯಾಕ್ಟೀರಿಯಾಲಜಿ
ಬ್ಯಾಕ್ಟೀರಿಯಾದ ರೋಗಕಾರಕ ಗುರುತಿಸುವಿಕೆ.
ರೋಗನಿರ್ಣಯದ ನಿಖರತೆ ಸುಧಾರಿಸುವುದು.
ಹೊಸ ಬ್ಯಾಕ್ಟೀರಿಯಾದ ತಳಿಗಳು ಮತ್ತು ಪ್ರತಿಜೀವಕ ನಿರೋಧಕ ಮಾದರಿಗಳ ಸಂಶೋಧನೆ.
2. ಮೈಕಾಲಜಿ
ಶಿಲೀಂಧ್ರಗಳ ಸೋಂಕಿನ ಗುರುತಿಸುವಿಕೆ ಮತ್ತು ಚಿಕಿತ್ಸೆ ಸುಧಾರಣೆ.
3. ಪರಾವಲಂಬಿ ಶಾಸ್ತ್ರ
ಪರಾವಲಂಬಿ ಜೀವಿಗಳ ಅಧ್ಯಯನ. ವಿಶೇಷವಾಗಿ ಉಷ್ಣವಲಯದ ಪ್ರದೇಶಗಳಲ್ಲಿ ಪರಾವಲಂಬಿ ಸೋಂಕುಗಳ ರೋಗ ನಿರ್ಣಯ ಮತ್ತು ನಿರ್ವಹಣೆಗೆ ಆದ್ಯತೆ.
ಕ್ಯಾಥ್ ಲ್ಯಾಬ್ ಉದ್ಘಾಟನೆ
ಈ ನಡುವೆ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ಅಪಘಾತ ಮತ್ತು ತುರ್ತು ಆರೈಕೆ ಕೇಂದ್ರದಲ್ಲಿ (TECC) ಅತ್ಯಾಧುನಿಕ ಮೊನಿಜ್ ಕ್ಯಾಥ್ ಲ್ಯಾಬ್ ಸೂಟ್ ಅನ್ನು ಸಚಿವ ಶರಣ್ ಪ್ರಕಾಶ್ ಪಾಟೀಲ್ ಗುರುವಾರ
ಸಂಜೆ ಉದ್ಘಾಟಿಸಿದರು.
ಒಂದು ಲ್ಯಾಬ್, ಹಲವು ಸೇವೆ
ಈ ಕ್ಯಾಥ್ ಲ್ಯಾಬ್ ಪ್ರಿ-ಕ್ಯಾಥ್ ಮತ್ತು ಪೋಸ್ಟ್-ಕ್ಯಾಥ್ ವಾರ್ಡ್‌ಗಳ ಜೊತೆಗೆ 8 ಹಾಸಿಗೆಗಳನ್ನು ಹೊಂದಿರುವ ವಾರ್ಡ್ ಆಗಿದೆ. ಈ ಕ್ಯಾಥ್ ಲ್ಯಾಬ್ ಮೂಲಕ ಆಂಜಿಯೋಗ್ರಫಿ ಮತ್ತು ಆಂಜಿಯೋಪ್ಲ್ಯಾಸ್ಟಿ, ಇತರ ಹೃದಯ ಕಾಯಿಲೆಗಳು ಹಾಗೂ ಸೆರೆಬ್ರಲ್ ಆಂಜಿಯೋಗ್ರಫಿ, ಇಂಟರ್ವೆನ್ಷನಲ್ ನ್ಯೂರೋರೇಡಿಯೋಲಾಜಿಕಲ್ ಅನೆರೈಸ್ಮ್ ಕಾಯಿಲಿಂಗ್, AVM ಎಂಬೋಲೈಸೇಶನ್, ಇಂಟ್ರಾ-ಆರ್ಟಿರಿಯಲ್ ಥ್ರಂಬೋಲಿಸಿಸ್, ಇಂಟರ್ವೆನ್ಟೋಲಾಜಿಕಲ್ ಡಿಯೋಲಾಜಿಕಲ್ ಪ್ರೊಸಿಜರ್ ಗರ್ಭಾಶಯದ ಎಂಬೋಲೈಸೇಶನ್, ಫೈಬ್ರಾಯ್ಡ್ ಎಂಬೋಲೈಸೇಶನ್, ಟ್ಯೂಮರ್ ಎಂಬೋಲೈಸೇಶನ್, TACE, ಪೆರಿಫೆರಲ್ ಆಂಜಿಯೋಗ್ರಫಿ ಮತ್ತು ಆಂಜಿಯೋಪ್ಲ್ಯಾಸ್ಟಿ ಮಾಡಬಹುದಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಟ್ರಾಮಾ & ಎಮರ್ಜೆನ್ಸಿ ಕೇರ್ ಸೆಂಟರ್ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳಿಗಾಗಿ ಎರಡು ಸಭಾಂಗಣಗಳನ್ನು ಉದ್ಘಾಟಿಸಿದರು.
ಈ ಸಭಾಂಗಣಕ್ಕೆ ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಹೆಸರಿಡಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯ ಸಭಾಂಗಣಕ್ಕೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ (RGUHS) ಧನಸಹಾಯ ಪಡೆಯಲಾಗಿದೆ.
ಎರಡೂ ಸಭಾಂಗಣಗಳು 150-180 ಆಸನ ಸಾಮರ್ಥ್ಯ ಹೊಂದಿದೆ, ಅತ್ಯಾಧುನಿಕ ಆಡಿಯೊ ಉಪಕರಣಗಳು ಮತ್ತು ಡಿಜಿಟಲ್ ಪೋಡಿಯಂ ಹೊಂದಿದೆ. ವಿಶೇಷ ಸಮ್ಮೇಳನಗಳು, ಸೆಮಿನಾರ್ಗಳು, ತರಬೇತಿ ಕಾರ್ಯಕ್ರಮಗಳಂತಹ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ವಿನಿಮಯ ಚಟುವಟಿಕೆಗಳನ್ನು ಆಯೋಜಿಸಬಹುದಾಗಿದೆ.
ಈ ಸಂದರ್ಭದಲ್ಲಿ ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್, ರೇರಾ ಅಧ್ಯಕ್ಷ ರಾಕೇಶ್ ಸಿಂಗ್, ರಾಜೀವ್ ಗಾಂಧಿ ವಿವಿ ಉಪ ಕುಲಪತಿ ಡಾ. ಎಂ.ಕೆ. ರಮೇಶ್, ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸೀನ್, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಬಿ.ಎಲ್. ಸುಜಾತಾ ರಾಠೋಡ್, ಟ್ರಾಮಾ ಕೇರ್ ಕೇಂದ್ರದ ಮುಖ್ಯಸ್ಥರಾದ ಡಾ. ಬಾಲಾಜಿ ಪೈ, ಬಿಎಂಸಿಆರ್ ಐ ನಿರ್ದೇಶಕರಾದ ಡಾ. ರಮೇಶ್ ಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳು, ಗಣ್ಯರು, ಇತರರು ಉಪಸ್ಥಿತರಿದ್ದರು.
20 ವರ್ಷಗಳಿಂದ ನೀವೇ ಮುಡಾ ಸದಸ್ಯರಾಗಿದ್ದೀರಿ, ಆದ್ರೂ ಯಾಕಿಂಗಾಯ್ತು?: ಸಿಎಂ ಸಿದ್ಧರಾಮಯ್ಯ ಪ್ರಶ್ನೆ
GOOD NEWS: ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದ ‘ಸಾರಿಗೆ ನೌಕರ’ರಿಗೆ ಗುಡ್ ನ್ಯೂಸ್