ನವದೆಹಲಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ರಾಜ್ಯ ಘಟಕವು ಭಾನುವಾರ ನಡೆಯಲಿರುವ ವಿಶೇಷ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ನೂತನ ಅಧ್ಯಕ್ಷ ಜಯ್ ಶಾ ಅವರನ್ನ ಗೌರವಿಸಲಿದೆ.
ಅಂದ್ಹಾಗೆ, ಜಯ್ ಶಾ ಅವರು ಐಸಿಸಿಯಲ್ಲಿ ಹುದ್ದೆಯನ್ನ ವಹಿಸಿಕೊಳ್ಳುವ ಮೊದಲು ಬಿಸಿಸಿಐ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಶಾ ಕಳೆದ ವರ್ಷ ಆಗಸ್ಟ್’ನಲ್ಲಿ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು ಮತ್ತು ಡಿಸೆಂಬರ್ 1, 2024 ರಂದು ಹುದ್ದೆಯನ್ನ ವಹಿಸಿಕೊಂಡರು. ಅವರು ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ.
ಐಸಿಸಿ ಅಧ್ಯಕ್ಷರಾದ ಐದನೇ ಭಾರತೀಯ.!
ಜಯ್ ಶಾ ಅವರು ಈ ಜಾಗತಿಕ ಸಂಸ್ಥೆಯನ್ನ ಮುನ್ನಡೆಸುವ ಐದನೇ ಭಾರತೀಯರಾಗಿದ್ದಾರೆ. ಶಾ ಅವರಿಗಿಂತ ಮೊದಲು, ಉದ್ಯಮಿ ದಿವಂಗತ ಜಗಮೋಹನ್ ದಾಲ್ಮಿಯಾ, ರಾಜಕಾರಣಿ ಶರದ್ ಪವಾರ್, ವಕೀಲ ಶಶಾಂಕ್ ಮನೋಹರ್ ಮತ್ತು ಕೈಗಾರಿಕೋದ್ಯಮಿ ಎನ್ ಶ್ರೀನಿವಾಸನ್ ವಿಶ್ವ ಕ್ರಿಕೆಟ್ ಸಂಸ್ಥೆಯನ್ನು ಮುನ್ನಡೆಸಿದ ಭಾರತೀಯರಲ್ಲಿ ಸೇರಿದ್ದಾರೆ. 36 ವರ್ಷದ ಶಾ ಕಳೆದ ಐದು ವರ್ಷಗಳಿಂದ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಬಿಸಿಸಿಐ ಕಾರ್ಯದರ್ಶಿಯಾಗಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು.!
ಬಿಸಿಸಿಐ ಕಾರ್ಯದರ್ಶಿಯಾಗಿ ಶಾ ಅವರ ಅಧಿಕಾರಾವಧಿಯು ಹಲವು ರೀತಿಯಲ್ಲಿ ಯಶಸ್ವಿಯಾಗಿದೆ. ಭಾರತೀಯ ಕ್ರಿಕೆಟ್’ನಲ್ಲಿ ಎರಡು ದಿನಾಂಕಗಳು ಬಹಳ ಮುಖ್ಯ. ಒಂದು ಅಕ್ಟೋಬರ್ 27, 2022 ರಂದು, ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಪುರುಷರಿಗೆ ಸಮಾನವಾದ ಶುಲ್ಕವನ್ನು ನೀಡಲಾಗುವುದು ಎಂದು ಘೋಷಿಸಿದಾಗ ಮತ್ತು ಇನ್ನೊಂದು ಜನವರಿ 28, 2023 ರಂದು ಮಹಿಳಾ ಪ್ರೀಮಿಯರ್ ಲೀಗ್ (WPL) ಗಾಗಿ ಆಟಗಾರರ ಬಿಡ್’ಗಳನ್ನು ಕರೆಯಲಾಯಿತು. ಐಪಿಎಲ್ ವಿಶ್ವ ಕ್ರಿಕೆಟ್’ನ ಸನ್ನಿವೇಶವನ್ನು ಬದಲಿಸಿದರೆ, ನಂತರ ಪುರುಷರಿಗೆ ಸಮಾನವಾದ ಶುಲ್ಕಗಳು ಮತ್ತು ಡಬ್ಲ್ಯುಪಿಎಲ್ ಮಹಿಳಾ ಕ್ರಿಕೆಟ್’ನಲ್ಲಿ ಹೊಸ ಕ್ರಾಂತಿಯನ್ನು ತಂದಿತು, ಅದರ ಶ್ರೇಯಸ್ಸು ಜಯ್ ಶಾಗೆ ಸಲ್ಲುತ್ತದೆ.
BREAKING: ತಮಿಳುನಾಡಿನಲ್ಲಿ ಮತ್ತಿಬ್ಬರು ಮಕ್ಕಳಿಗೆ HMPV ವೈರಸ್ ದೃಢ: ಭಾರತದಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆ
SHOCKING NEWS: ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆ, ತಾಯಿಯನ್ನೇ ಕೊಲೆಗೈದ ಪುತ್ರ
BREAKING : ದಿಢೀರ್ ‘ಕ್ರಿಕೆಟ್’ಗೆ ವಿದಾಯ ಘೋಷಿಸಿದ ‘ವರುಣ್ ಆರನ್’, ಶಾಕಿಂಗ್ ನಿವೃತ್ತಿ |Varun Aaron