ನವದೆಹಲಿ: ದೆಹಲಿಯ ಶಾಲೆಗಳಿಗೆ ಇತ್ತೀಚೆಗೆ ನಡೆದ ಸರಣಿ ಹುಸಿ ಇಮೇಲ್ಗಳಲ್ಲಿ ಕನಿಷ್ಠ 23 ಬಾಂಬ್ ಬೆದರಿಕೆಗಳನ್ನು ವಿದ್ಯಾರ್ಥಿಯೊಬ್ಬ ಕಳುಹಿಸಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ದೆಹಲಿಯ ವಿವಿಧ ಶಾಲೆಗಳಿಗೆ 12 ನೇ ತರಗತಿಯ ವಿದ್ಯಾರ್ಥಿ ಇಮೇಲ್ಗಳನ್ನು ಕಳುಹಿಸಿದ್ದಾನೆ. “ವಿಚಾರಣೆಯ ಸಮಯದಲ್ಲಿ, ವಿದ್ಯಾರ್ಥಿ ಈ ಹಿಂದೆಯೂ ಬೆದರಿಕೆ ಇಮೇಲ್ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ” ಎಂದು ದೆಹಲಿ ಪೊಲೀಸ್ ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ