ಬೆಂಗಳೂರು: ರಾಜ್ಯದಲ್ಲಿ ತಮ್ಮದೇ ಆದಂತ ಸಂಪ್ರದಾಯ, ಆಚರಣೆಗಳ ಮೂಲಕ ಗುರ್ತಿಸಿಕೊಂಡಿರುವಂತ ಸಮುದಾಯ ಕಾಡುಗೊಲ್ಲ ಬುಡಕಟ್ಟು ಸಮುದಾಯವಾಗಿದೆ. ಈ ಸಮುದಾಯವನ್ನು ಎಸ್ ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹ ಹಲವು ದಿನಗಳ ಹಿಂದಿನದ್ದು. ಇಂದು ಮತ್ತೆ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಈ ಒತ್ತಾಯವನ್ನು ಮಾಡಲಾಗಿದೆ.
ಈ ವೇಳೆ ಮಾತನಾಡಿದಂತ ಎಂಎಲ್ಸಿ ನಾಗರಾಜ್ ಯಾದವ್ ಅವರು, ಈ ಜನಾಂಗ ಹಿಂದುಳಿದೆ. ಈ ಜನಾಂಗವನ್ನು ಎಸ್ ಟಿ ಪಟ್ಟಿಗೆ ಸೇರಿಸಲು ನೀವೇ ಮುಂದಾಗಬೇಕು. ಕಾಡುಗೊಲ್ಲ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸಲ್ಲಿಸುವ ಕೆಲಸವಾಗಬೇಕು. ಅಲೆ ಮಾರಿ ಪಟ್ಟಿಗೆ ಸೇರಿಸುವ ಕೆಲಸ ಆಗಬೇಕು. ಕಾಡುಗೊಲ್ಲರ ಅಭಿವೃದ್ಧಿ ನಿಗಮಕ್ಕೆ ಕಾಡುಗೊಲ್ಲ ಸಮುದಾಯದ ವ್ಯಕ್ತಿಯನ್ನೇ ಅಧ್ಯಕ್ಷರನ್ನಾಗಿ ಈ ಕೂಡಲೇ ಮಾಡಬೇಕು ಎಂದು ಆಗ್ರಹಿಸಿದರು.
ಆ ಬಳಿಕ ಮಾತನಾಡಿದಂತ ಕರ್ನಾಟಕ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಧ್ಯಕ್ಷರಾದಂತ ಸಿ.ಶಿವು ಯಾದವ್ ಮಾತನಾಡಿ, 2010ರಲ್ಲಿ ಕುಲಶಾಸ್ತ್ರ ಅಧ್ಯಯ ಮಾಡಿಸಿ, 2014ರಲ್ಲಿ ನಿಮ್ಮ ಸಚಿವ ಸಂಪುಟದ ಮುಂದೆ ತಂದು, ಭಾರತ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದಕ್ಕಾಗಿ ಕರ್ನಾಟಕ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದಿಂದ ವಂದನೆಗಳು. ನೀವು ಕಳಿಸಿದಂತ ವರದಿಯನ್ನು ಕೇಂದ್ರ ಸರ್ಕಾರ ಸಣ್ಣಪುಟ್ಟ ಸಬೂಬು ಹೇಳಿ ಮೂರು ಬಾರಿ ವಾಪಾಸ್ಸು ಕಳಿಸಲಾಗಿದೆ. ಮೂರನೇ ಬಾರಿಯೂ ಅನುಸರಣಾ ವರದಿಯನ್ನು ಕೇಳಿರುವುದು ದುರದೃಷ್ಟಕರ ಬೆಳವಣಿಗೆ. ತಾವು ಹಿಂದುಳಿದ ನಾಯಕರು, ತಾವೇ ಬೆಳೆಸಿದಂತ ಕೂಸನ್ನು ಎಸ್ ಟಿ ಪಟ್ಟಿಗೆ ಸೇರಿಸಲು ತಾವೇ ಬೆಳೆಸಿದ ಕೂಸನ್ನು ಬೆಳೆಸಲು ಮನವಿ ಮಾಡಲಾಯಿತು.
ತುಮಕೂರು ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷರಾದಂತ ಚಂಗಾವರದ ಕರಿಯಪ್ಪ ಅವರು ಮಾತನಾಡಿ ಈ ಹಿಂದೆ ಕಾಡುಗೊಲ್ಲ ಸಮುದಾಯದವರಿಗೆ ಯಾವುದೇ ಆದಾಯದ ಮಿತಿ ಇರೋದಿಲ್ಲ. ಬಿಜೆಪಿ ಅವಧಿಯಲ್ಲಿ ಆದಾಯದ ಮಿತಿಯನ್ನು ಜಾರಿಗೊಳಿಸಲಾಗಿದೆ. ಎಸ್ ಟಿ ಸೇರಿಸುವಂತ ಎಲ್ಲಾ ಲಕ್ಷಣಗಳು ಕಾಡುಗೊಲ್ಲ ಸಮುದಾಯದವರಿಗೆ ಇದ್ದಾವೆ ಎಂಬುದಾಗಿ ಆಗ್ರಹಿಸಿದರು.
2014 ರಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯೂ ಸೇರಿ ಕೇಂದ್ರ ಸರ್ಕಾರ ಪದೇ ಪದೇ ತಿರಸ್ಕರಿಸುತ್ತಿರುವುದರ ಬಗ್ಗೆ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮೈಸೂರಿನ ಬುಡಕಟ್ಟು ಅಧ್ಯಯನ ಕೇಂದ್ರದಿಂದ ಸಮಗ್ರ ವರದಿಯನ್ನು ತರಿಸಿಕೊಂಡು ಕೇಂದ್ರ ತೆಗೆದಿರುವ ತಕರಾರುಗಳಿಗೆ ಪ್ರತಿಯಾಗಿ ದಾಖಲೆಗಳ ಸಮೇತ ಮತ್ತೊಮ್ಮೆ ಕೇಂದ್ರಕ್ಕೆ ಪ್ರಸ್ತಾಪನೆ ಸಲ್ಲಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಸಂದರ್ಭದಲ್ಲಿ ಡಾ.ಬಸವರಾಮಾನಂದ ಸ್ವಾಮೀಜಿ, ಎಂಎಲ್ಸಿ ನಾಗರಾಜ್ ಯಾದವ್, ತುಮಕೂರು ಜಿಲ್ಲಾ ಕಾಡುಗೊಲ್ಲ ಸಂಘದ ಅಧ್ಯಕ್ಷರಾದಂತ ಚಂಗವಾರದ ಕರಿಯಪ್ಪ, ಗೌರವಾಧ್ಯಕ್ಷ ಪೂಜಾರಿ ಪಾಪಣ್ಣ, ಕರ್ನಾಟಕ ಕಾಡುಗೊಲ್ಲ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ.ಶಿವು ಯಾದವ್ ಸೇರಿದಂತೆ ಇತರೆ ಕಾಡುಗೊಲ್ಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಇಲ್ಲಿದೆ ಇಂದಿನ ಸಿಎಂ ಸಿದ್ಧರಾಮಯ್ಯ ನೇತೃತ್ವದ ಆಹಾರ ಇಲಾಖೆ ಅಧಿಕಾರಗಳ ಸಭೆಯ ಪ್ರಮುಖ ಹೈಲೈಟ್ಸ್
ಸಾರ್ವಜನಿಕರಿಂದ ನೆರವಿಗಾಗಿ ಮನವಿ: ಈ ಕುಟುಂಬಕ್ಕೆ ನಿಮ್ಮ ಸಹಾಯದ ಹಸ್ತವಿರಲಿ