ಶಿವಮೊಗ್ಗ: ತಹಶೀಲ್ದಾರ್ ಲೇಔಟ್ ಗಳಲ್ಲಿ ನಿವೇಶನ ಖರೀದಿಸಿದವರಿಗೆ ಎ-ಖಾತಾ, ಬಿ-ಖಾತಾ ಲಭ್ಯವಾಗದೇ ಸಮಸ್ಯೆ ಉಂಟಾಗಿತ್ತು. ತಹಶೀಲ್ದಾರ್ ಲೇಔಟ್ ಗಳಲ್ಲಿ ಸೈಟ್ ಖರೀದಿಸಿ ಸಮಸ್ಯೆಗೆ ಸಿಲುಕಿದ್ದಂತ ಜನರಿಗೆ ಬಿ-ಖಾತಾ ಒದಗಿಸಲು ರಾಜ್ಯ ಸರ್ಕಾರ ನಿರ್ದೇಶಿಸಿದೆ. ಈ ಸಮಸ್ಯೆ ಪರಿಹರಿಸಿದಂತ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಾಗರ ತಾಲ್ಲೂಕು ಅಸಂಘಟಿತ ಕಾರ್ಮಿಕ ಘಟಕದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿದ್ಧಪ್ಪ ಧನ್ಯವಾದ ತಿಳಿಸಿದ್ದಾರೆ.
ಇಂದು ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಸಾಗರದಲ್ಲಿ ತಹಶೀಲ್ದಾರ್ ಲೇಔಟ್ ಸಮಸ್ಯೆ ಉಂಟಾಗಿತ್ತು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಸಮಸ್ಯೆ ಸರಿ ಪಡಿಸಲು ಮನವಿ ಮಾಡಲಾಗಿತ್ತು. ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸೋದಕ್ಕೆ ಕೋರಲಾಗಿತ್ತು ಎಂದರು.
ತಹಶೀಲ್ದಾರ್ ನೋಂದಾಯಿತ ಲೇಔಟ್ ಗಳಲ್ಲಿ ನಿವೇಶನ ಖರೀದಿಸಿದ, ಮನೆ ನಿರ್ಮಿಸಿದ ಮಾಲೀಕರ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ನಿವೇಶನ ಮಾರಾಟಕ್ಕೂ ಆಗದೇ, ಬ್ಯಾಂಕ್ ನಿಂದ ಸಾಲ ಪಡೆಯೋದಕ್ಕೂ ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕ್ಕಿದ್ದರು. ಈ ಎಲ್ಲಾ ಸಮಸ್ಯೆಯನ್ನು ಸಚಿವರು, ಶಾಸಕರಲ್ಲಿ ವಿವರಿಸಿ ಹೇಳಲಾಗಿತ್ತು. ಅಲ್ಲದೇ ಬಿ-ಖಾತೆ ಮಾಡಿಕೊಡುವಂತೆ ಮಾಧ್ಯಮಗಳ ಮೂಲಕವೂ ಸರ್ಕಾರದ ಗಮನ ಸೆಳೆಯಲಾಗಿತ್ತು ಎಂದು ತಿಳಿಸಿದರು.
ಸಾಗರ ನಗರ ವ್ಯಾಪ್ತಿಯಲ್ಲೇ ಈ ಸಮಸ್ಯೆಗೆ ಒಳಗಾದಂತ 4000ಕ್ಕೂ ಹೆಚ್ಚು ಪ್ರಕರಣಗಳಿದ್ದಾವೆ. ನಮ್ಮ ಮನವಿ ಪುರಸ್ಕರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನಗರಾಭಿವೃದ್ಧಿ ಸಚಿವರು, ಪ್ರಧಾನ ಕಾರ್ಯದರ್ಶಿಗಳು ನೀಡಿದ್ದರು. ಈ ನಿವೇಶನಗಳಲ್ಲಿ ವಾಸ ಮಾಡುತ್ತಿರುವವರು ನಿವೇಶನ ಸಂಬಂಧ ಶುಲ್ಕವನ್ನು ಸ್ಥಳೀಯ ಸಂಸ್ಥೆಗಳಿಗೆ ಪಾವತಿ ಮಾಡಿಕೊಂಡು ಬಂಧಿರುತ್ತಾರೆ. ತಹಶೀಲ್ದಾರ್ ಅವರಿಗೆ ಶುಲ್ಕ ಪಾವತಿ ಮಾಡಿ ಭೂಪರಿವರ್ತನೆ ಮಾಡಿಕೊಂಡಿರುತ್ತಾರೆ. ಆದರೇ ಇವರಿಗೆ ಹಕ್ಕುಪತ್ರ ಕೊಡುವಾಗ ಮಾತ್ರ ತಾರತಮ್ಮ ನಡೆಸಲಾಗುತ್ತಿತ್ತು ಎಂದರು.
ನಮ್ಮ ಮನವಿಯ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಬಿ-ಖಾತಾ ಯೋಜನೆ ಜಾರಿಗೆ ತರೋದಕ್ಕೆ ಮುಂದಾಗಿದೆ. ಈ ಮೂಲಕ ತಹಶೀಲ್ದಾರ್ ಲೇಔಟ್ ಗಳಲ್ಲಿ ನಿವೇಶನ ಖರೀದಿಸಿದವರು, ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವವರಿಗೆ ಶೀಘ್ರದಲ್ಲೇ ಬಿ-ಖಾತಾ ಹಕ್ಕುಪತ್ರ ಸಿಗಲಿದೆ. ಈ ಸಂಬಂಧ ಸರ್ಕಾರದಿಂದ ಆದೇಶ ಹೊರಡಿಸಬೇಕಿದೆ. ಆದೇಶ ಜಾರಿಯಾದ ನಂತ್ರ ಸಮಸ್ಯೆ ಬಗೆ ಹರಿಸುವ ಭರವಸೆ ಇದೆ ಎಂದರು.
ತಹಶೀಲ್ದಾರ್ ಲೇಔಟ್ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಿದಂತ ಪೌರಾಡಳಿತ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಯೋಜನೆ ಜಾರಿಗೆ ತರಲು ನಮಗೆ ಬೆಂಬಲ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಕೃತಜ್ಞತೆಗಳು ಅಂತ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ
GOOD NEWS: ಆಶಾ ಕಾರ್ಯಕರ್ತೆಯರಿಗೆ ರೂ.9,500 ಮುಂಗಡವಾಗಿ ನೀಡಲು ಸರ್ಕಾರ ಸಿದ್ಧ: ಸಚಿವ ದಿನೇಶ್ ಗುಂಡೂರಾವ್