ಶಿವಮೊಗ್ಗ: ಬೈಕ್ ಅಪಘಾತದಲ್ಲಿ ಮೃತಪಟ್ಟಂತ ಪತಿಯ ಸಾವಿನ ಸುದ್ದಿ ಕೇಳಿದಂತ ಪತ್ನಿಯೂ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವಂತ ಘಟನೆ ಶಿವಮೊಗ್ಗದ ಕಿಲ್ಲೆ ಕ್ಯಾತರ ಕ್ಯಾಂಪ್ ನಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದಂತ ಇಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆಸಿಗೆ ಗ್ರಾಮ ಪಂಚಾಯ್ತಿಯ ಕಿಲ್ಲೆ ಕ್ಯಾತರ ಕ್ಯಾಂಪ್ ನ ಮಂಜುನಾಥ್(25) ಅವರು ಶಿಕಾರಿಪುರದ ಬಳಿಯಲ್ಲಿ ಬೈಕ್ ಅಪಘಾತದಲ್ಲಿ ಬುಧವಾರ ಗಾಯಗೊಂಡಿದ್ದರು. ಆದರೇ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
ಪತಿ ಮಂಜುನಾಥ್ ಬೈಕ್ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿದಂತ ಪತ್ನಿ ಅಮೃತ(21) ಮನೆಗೆ ಬಂದು ತನ್ನ ವೇಲಿನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರ ಸಾವಿನ ಸುದ್ದಿಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
BREAKING: ಮಕ್ಕಳಿಗೆ ಬಿಸಿಯೂಟ ತಯಾರಿಸುವ ವೇಳೆಯಲ್ಲೇ ಕುಕ್ಕರ್ ಸ್ಪೋಟ: ಇಬ್ಬರು ಅಡುಗೆ ಸಹಾಯಕಿಯರಿಗೆ ಗಾಯ
ರಾಜಸ್ಥಾನದಲ್ಲಿ 150 ಅಡಿ ಆಳದ ಕೊಳವೆಬಾವಿಗೆ ಬಿದ್ದಿದ್ದ 3 ವರ್ಷದ ಬಾಲಕಿ ರಕ್ಷಣೆ