ಬೆಂಗಳೂರು: ನಗರದ ವಿಕಲಚೇತನರಿಗೆ ಮಹತ್ವದ ಮಾಹಿತಿಯನ್ನು ಬಿಎಂಟಿಸಿ ಹಂಚಿಕೊಂಡಿದ್ದೆ. 2025 ನೇ ಸಾಲಿನ ವಿಕಲಚೇತನರ ರಿಯಾಯಿತಿ ಬಸ್ ಪಾಸ್ ವಿತರಿಸುವ/ನವೀಕರಿಸಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬೆಂ.ಮ.ಸಾ.ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಸರ್ಕಾರದ ನಿರ್ದೇಶನದಂತೆ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ಕೋರಿ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ವಿಕಲಚೇತನ ಫಲಾನುಭವಿಗಳಿಗೂ ರಿಯಾಯಿತಿ ದರದಲ್ಲಿ ಪಾಸುಗಳನ್ನು ವಿತರಿಸುತ್ತಿದೆ ಎಂದಿದೆ.
2025 ನೇ ಸಾಲಿನ ವಿಕಲಚೇತನರ ಪಾಸಿಗಾಗಿ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಲು ದಿನಾಂಕ: 30.12.2024 ರಿಂದ ಅವಕಾಶ ಕಲ್ಪಿಸಲಾಗಿದೆ. ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ತದನಂತರ ತಾವು ಆಯ್ಕೆ ಮಾಡಿಕೊಂಡ ಬಸ್ ನಿಲ್ದಾಣಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ, ಪಾಸುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ.
2025 ನೇ ಸಾಲಿನ ವಿಕಲಚೇತನರ ರಿಯಾಯಿತಿ ಪಾಸುಗಳನ್ನು ದಿನಾಂಕ 30.12.2024 ರಿಂದ ಕೆಳಕಂಡಂತೆ ವಿತರಿಸಲು/ನವೀಕರಿಸಲು ಕ್ರಮ ಕೈಗೊಳ್ಳಲಾಗಿದೆ.
- ವಿಕಲಚೇತನರ ನೂತನ ಪಾಸುಗಳನ್ನು ವರ್ಷವಿಡಿ ವಿತರಣೆ ಮಾಡಲಾಗುವುದು.
- 2024 ನೇ ಸಾಲಿನ ವಿಕಲಚೇತನರ ಬಸ್ ಪಾಸುಗಳನ್ನು ದಿನಾಂಕ: 28.02.2025 ರ ಒಳಗೆ ನವೀಕರಿಸಿಕೊಳ್ಳುವುದು.
- ವಿಕಲಚೇತನರ ನೂತನ/ನವೀಕರಣ ಪಾಸಿನ ದರ ರೂ.660/-.
- ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2024 ನೇ ಸಾಲಿನಲ್ಲಿ ವಿತರಿಸಿ 31.12.2024 ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸುಗಳನ್ನು 28.02.2025 ರವರೆಗೆ ಮಾನ್ಯ ಮಾಡಲಾಗುವುದು.
- ವಿಕಲಚೇತನರ ನೂತನ ಪಾಸುಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾತ್ರ ವಿತರಣೆ ಮಾಡಲಾಗುವುದು.
- ಕಳೆದ ಸಾಲಿನ ವಿಕಲಚೇತನರ ಬಸ್ ಪಾಸುಗಳನ್ನು ಈ ಕೆಳಕಂಡ ಬಸ್ ನಿಲ್ದಾಣಗಳಲ್ಲಿ ನವೀಕರಿಸಲಾಗುವುದು.
ಕೆಂಪೇಗೌಡ ಬಸ್ ನಿಲ್ದಾಣ ಶಿವಾಜಿನಗರ ಬಸ್ ನಿಲ್ದಾಣ ಶಾಂತಿನಗರ ಟಿಟಿಎಂಸಿ ಕೃ.ರಾ ಮಾರುಕಟ್ಟೆ ಬಸ್ ನಿಲ್ದಾಣ, ಬನಶಂಕರಿ ಟಿಟಿಎಂಸಿ ಜಯನಗರ ಟಿಟಿಎಂಸಿ, ಕೆಂಗೇರಿ ಟಿಟಿಎಂಸಿ ಹೊಸಕೋಟೆ ಬಸ್ ನಿಲ್ದಾಣ, ವಿಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ವೈಟ್ಫಿಲ್ಡ್ ಟಿಟಿಎಂಸಿ, ಯಲಹಂಕ ಹಳೆ ಬಸ್ ನಿಲ್ದಾಣ,ದೊಮ್ಮಲೂರು ಟಿಟಿಎಂಸಿಗಳಲ್ಲಿ ಬಸ್ ಪಾಸ್ ವಿತರಿಸುವುದಾಗಿ ಹೇಳಿದೆ.
ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆಗೆ ಬಿಗಿ ಬಂದೋಬಸ್ತ್, ಎಲ್ಲೆಲ್ಲೂ ಕಟ್ಟೆಚ್ಚರ: ಎಸ್ಪಿ ಮಿಥುನ್ ಕುಮಾರ್
ALERT : `iOS’ ಡಿವೈಸ್ ಗಳು` ಹ್ಯಾಕಿಂಗ್‌ಗೆ ಹೆಚ್ಚು ಗುರಿಯಾಗುತ್ತವೆ : ಅಧ್ಯಯನದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ.!