ಕಲಬುರಗಿ: ಕೊಲೆ ಬೆದರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಪಾಂಚಾಳ್ ಅವರ ಡೆತ್ ನೋಟನಲ್ಲಿ ವಿರಶೈವ ಲಿಂಗಾಯತ ಸಮಾಜದ ಆದೋಲ ಶ್ರೀಗಳಿಗೆ ಜೀವ ಬೆದರಿಕೆ ಇದೆ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಜೀವ ಬೇದರಿಕೆ ಇರುವ ಆಂದೋಲ ಶ್ರೀಗಳು ವೀರಶೈವ ಲಿಂಗಾಯತ ಸಮಾಜದರು ಇದಾರೋ ಏನು ಇಲವೂ? ಎಂನ್ನೂವುದು ವಿರಶೈವ ಮಹಾಸಭೆ ಉತ್ತರಿಸಬೇಕು ಎಂದು ಮಾಜಿ ಶಾಸಕ ಹಾಗೂ ಸಮಾಜದ ಮುಖಂಡ ರಾಜಕುಮಾರ ಪಾಟೀಲ್ ತೇಲ್ಕೂರ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ವಿರಶೈವ ಲಿಂಗಾಯತ ಸಮಾಜದ ಮುಖಂಡರಾದ ಚಂದು ಪಾಟೀಲರಿಗೆ ಜೀವ ಬೆದರಿಕೆ ಇರುವ ಕಾರಣ ವಿರಶೈವ ಲಿಂಗಾಯತ ಮಹಾಸಬೆ ಅವರಿಗೆ ಸೂಕ್ತ ಬದ್ರತೆ ನಿಡಲು ಮನವಿ ಮಾಡಿರುವುದು ಸ್ವಾಗತಾರ್ಹ ಧನ್ಯವಾದಗಳು ಇದು ಸಮಾಜದ ಸಂಘಟನೆಯ ಕೆಲಸ ಕೂಡ ಹೌದು, ಆದರೆ ಅವರ ಜೊತೆಗೆ ಬೆದರಿಕೆ ಇರುವ ಆಂದೋಲಾ ಶ್ರೀಗಳಿಗೂ ಭದ್ರತೆ ನೀಡಲು ಮನವಿ ಮಾಡಬೇಕಿತ್ತು ಯಾಕೆ ಮಾಡಿಲ್ಲಾ ತಿಳಿಯುತ್ತಿಲ್ಲಾ ಮಹಾಸಬೆಯವರಿಗೆ ಈ ವಿಷಯ ಗೋತ್ತಿಲ್ವಾ ಅಥವಾ ಆಂದೋಲಾ ಶ್ರೀಗಳು ವಿರಶೈವ ಲಿಂಗಾಯತ ಸಮಾಜದವರು ಅಲ್ವಾ?
ಸಮಸ್ತ ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ಪ್ರಥಮವಾಗಿ ಧ್ವನಿ ಎತ್ತುವ ಶ್ರೀಗಳೆ ಆಂದೋಲ ಶ್ರೀಗಳ ಇಂತಹ ಶ್ರೀಗಳ ಬಗ್ಗೆ ಮಹಾಸಭೆ ನಿರ್ಲಕ್ಷ ಸಲ್ಲದು. ಮಹಾಸಭೆ ತೆಗೆದುಕೊಂಡ ನಿರ್ಧಾರ ಸರಿಯಿಲ್ಲ. ತಮ್ಮ ವಯಕ್ತಿಕ ನಿಲೂವುಗಳು ಎನ್ನಿದರೂ ವಯಕ್ತಿಕವಾಗಿರಲಿ ನಿಮ್ಮನ್ನೂ ಸಮಾಜದವರು ಅಧ್ಯಕ್ಷರನ್ನಾಗಿ ಮಾಡಿದು ಸಮಾಜಕ್ಕೆ ಅನ್ಯಾಯವಾದಗ ಧ್ವನಿ ಎತ್ತಲೂ ಹಾಗೂ ಸಮಾಜದ ಸಂಘಟನೆಗಾಗಿ ಹೊರತು ಪಕ್ಷಪಾತ ಮಾಡಲು ಅಲ್ಲಾ, ರಾಜಕೀಯ ಹಾಗೂ ಪಕ್ಷಪಾತ ಮಾಡುವುದಿದರೆ ತಮ್ಮ ಮಹಾಸಭೆಯ ಜವಬ್ದಾರಿಯಿಂದ ಮುಕ್ತರಾಗಿ ರಾಜಕೀಯ ಮಾಡಿ ಎಂದು ಸಲಹೆ ನೀಡಿದರು.
ಆಂದೋಲ ಶ್ರೀಗಳ ಬೆನ್ನಿಗೆ ಕೊಟ್ಯಾಂತರ ಹಿಂದೂಗಳು ಇದ್ದಾರೆ ,ಆದರೆ ಸಮಾಜದ ಶ್ರೀಗಳಿಗೆ ಜೀವ ಬೇದರಿಕೆ ಇದೆ ಎಂಬುವುದು ಅರಿತು ಕೂಡ ಭದ್ರತೆ ಕೋಡಲು ಆಗ್ರಹಿಸದ ಮಹಾಸಬೆಯ ನಿರ್ದಾರಕ್ಕೆ ನನ್ನ ದಿಕ್ಕಾರ . ಇಂಥ ಸಣ್ಣತನ ಪ್ರದರ್ಶನ ಮಾಡುವ ಮಹಾಸಭೆ ನಡೆ ಖಂಡಿಸುತ್ತೆನೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸೇಡಂನ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಅವರು,ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳನ್ನು ಮತ್ತು ಎಲ್ಲಾ ಮಠಾಧಿಶರನ್ನು ಸಮಾನಾಗಿ ಕಾಣುವ ಹಾಗೂ ಅನ್ಯಾಯ ಕಂಡಾಗ ಪಕ್ಷಬೇದ ಮರೆತು ಧ್ವನಿ ಎತ್ತುವ ಮಹಾಸಭೆಯ ಅವಶ್ಯತೆ ಇದೆ, ಹೊರತು ಒಂದು ಪಕ್ಷದ ಮುಖವಾಣಿಯಂತಿರುವ ಮಹಾಸಭೆ ನಮಗೆ ಬೇಡ ಎಂದರು.
ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಜ.1ರಿಂದ ಈ ರೈಲುಗಳ ವೇಳಾಪಟ್ಟಿ ಬದಲಾವಣೆ, ಹೀಗಿದೆ ಹೊಸ ಟೈಂ
BREAKING: ಎರಡು ಕುಟುಂಬಗಳ ನಡುವೆ ಮಾರಾಮಾರಿ: ಜಗಳ ಬಿಡಿಸಲು ಹೋದ ಮಹಿಳೆಯನ್ನೇ ಕೊಲೆ