ಧಾರವಾಡ: ಜಿಲ್ಲೆಯಲ್ಲಿ ಕಬ್ಬು ಕಟಾವು ವಿಚಾರಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಈ ಮಾರಾಮಾರಿಯಲ್ಲಿ ಜಗಳ ಬಿಡಿಸಲು ಹೋದಂತ ಓರ್ವ ಮಹಿಳೆಯನ್ನೇ ಕೊಲೆ ಮಾಡಲಾಗಿದೆ.
ಧಾರವಾಡದ ಕಲಘಟಗಿ ತಾಲ್ಲೂಕಿನ ಕರುವಿನಕೊಪ್ಪದಲ್ಲಿ ಕಬ್ಬು ಕಟಾವು ವಿಚಾರಕ್ಕೆ ಎರುಡ ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದಂತ ಅನುಸೂಯ(40) ಎಂಬ ಮಹಿಳೆ ಜಗಳ ಬಿಡಿಸೋದಕ್ಕೆ ತೆರಳಿದ್ದಾರೆ. ಆದರೇ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಇದಲ್ಲದೇ ಸಚಿನ್ ಪಾಟೀಲ್, ಬಸವರಾಜ, ಮೈಲಾರಪ್ಪ ಎಂಬುವರು ಈ ಮಾರಾಮಾರಿಯಲ್ಲಿ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
GOOD NEWS: ಹೊಸ ವರ್ಷಕ್ಕೆ ಮುರ್ಡೇಶ್ವರ ಕಡಲ ತೀರ ಪ್ರವಾಸಿಗರಿಗೆ ಓಪನ್: DC ಮಾಹಿತಿ | Murudeshwar Beach
BIGG NEWS : 2025 ನೇ ಸಾಲಿನ ರಾಜ್ಯ `ಸಾರ್ವತ್ರಿಕ ರಜೆ’ ದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ | Holiday List 2025