ಬೀದರ್ : ಆನ್ ಲೈನ್ ಗೇಮ್ ಹುಚ್ಚಿಗೆ ಬಿದ್ದಿದ್ದ ಯುವಕನೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯಲ್ಲಿ ನಡೆದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಜ್ಯೋತಿ ತಾಂಡದ ವಿಜಯ್ ಕುಮಾರ್ ಜಗದೀಶ್ ಹೊಳ್ಳೆ ಎಂಬಾತ ಆನ್ ಲೈನ್ ಗೇಮ್ ಹುಚ್ಚಿಗೆ ಬಲಿಯಾಗಿದ್ದಾನೆ.
ವಿಜಯ್ ಕುಮಾರ್ ಆನ್ ಲೈನ್ ಗೇಮ್ ನಿಂದಾಗಿ ಬರೋಬ್ಬರಿ 12 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಸಾಲ ತೀರಿಸಲಾಗದೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಮಹಾರಾಷ್ಟ್ರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.