ಹಿಮಾಚಲ ಪ್ರದೇಶ: ಕೆಲ ದಿನಗಳಿಂದ ಭಾರೀ ಹಿಮಪಾತವು ಹಿಮಾಚಲ ಪ್ರದೇಶದಲ್ಲಿ ಆಗುತ್ತಿದೆ. ನಿನ್ನೆಯಂತೂ ಭಾರೀ ಹಿಮಪಾತವೇ ಉಂಟಾಗಿದ್ದು, ಇದರ ಪರಿಣಾಮ ರಸ್ತೆಯೆಲ್ಲ ಬಂದ್ ಆಗಿ, ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ರೀತಿಯ ಟ್ರಾಫಿಕ್ ಚಾಮ್ ನಲ್ಲಿ ಸಿಲುಕ್ಕಿದ್ದಂತ 1000 ವಾಹನಗಳನ್ನು ಸಂಚಾರ ದಟ್ಟಣೆ ಕ್ಲಿಯರ್ ಮಾಡಿದ್ದು ಪೊಲೀಸರು. ಅದು ಹೇಗೆ ಅಂತ ಮುಂದೆ ಸುದ್ದಿ ಸಹಿತ ವೀಡಿಯೋ ಇದೆ ನೋಡಿ.
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಜನಪ್ರಿಯ ಸ್ಕೀ ರೆಸಾರ್ಟ್ ಸೋಲಾಂಗ್ ನಾಲಾ ಬಳಿ 1,000 ವಾಹನಗಳು ಸಿಲುಕಿಕೊಂಡಿದ್ದು, ಇದುವರೆಗಿನ ಅತ್ಯಂತ ಕೆಟ್ಟ ಟ್ರಾಫಿಕ್ ಜಾಮ್ ಗೆ ಸಾಕ್ಷಿಯಾಗಿದೆ. ಕುಲ್ಲು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಲುಕಿದ್ದ 5,000 ಪ್ರವಾಸಿಗರನ್ನು ರಕ್ಷಿಸಿದ್ದಾರೆ. ಭಾರೀ ಹಿಮಪಾತ ಮತ್ತು ರಜಾದಿನಗಳಲ್ಲಿ ಟೌರಿಸ್ಟ್ ಗಳ ಭಾರಿ ಒಳಹರಿವಿನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
#WATCH | Himachal Pradesh: Traffic congestion and slow vehicular movement witnessed in Manali as people throng to hilly areas after fresh snowfall
(Source: Himachal Pradesh Police) pic.twitter.com/hmWfK6Xxjq
— ANI (@ANI) December 24, 2024
ಕುಲ್ಲು ಪೊಲೀಸರ ಹೇಳಿಕೆಯ ಪ್ರಕಾರ, ಶುಕ್ರವಾರ ಹೊಸ ಹಿಮಪಾತವು ತೀವ್ರ ಪ್ರಯಾಣ ಅಡೆತಡೆಗಳಿಗೆ ಕಾರಣವಾಯಿತು. “ಇಂದು 27.12.2024 ರಂದು ಹೊಸ ಹಿಮಪಾತದಿಂದಾಗಿ, ಸುಮಾರು 1,000 ಪ್ರವಾಸಿಗರು ಮತ್ತು ಇತರ ವಾಹನಗಳು ಸೋಲಾಂಗ್ ನಾಲಾದಲ್ಲಿ ಸಿಲುಕಿಕೊಂಡಿದ್ದವು. ಈ ವಾಹನಗಳಲ್ಲಿ ಸುಮಾರು 5,000 ಪ್ರವಾಸಿಗರು ಇದ್ದರು. ವಾಹನಗಳು ಮತ್ತು ಪ್ರವಾಸಿಗರನ್ನು ಕುಲ್ಲು ಪೊಲೀಸರು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ದಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ” ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.
Watch: Heavy snowfall in Manali and surrounding areas, including Solang Nala and Atal Tunnel, has led to a traffic jam, stranding over 1,000 tourist vehicles. A 6-kilometer-long jam formed on the Manali-Solang Nala route as tourists’ vehicles got stuck in the snow pic.twitter.com/CoADiIRT0W
— IANS (@ians_india) December 27, 2024
BREAKING: ಮನಮೋಹನ್ ಸಿಂಗ್ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ