ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಮ್ಮಲ್ಲಿ ಹಲವರು ನಾನ್ ವೆಜ್ ಪ್ರಿಯರಿದ್ದಾರೆ. ಇನ್ನು ಬಾನುವಾರ ಮನೆಯಲ್ಲಿ ಚಿಕನ್, ಮಟನ್, ಮೀನು ಮುಂತಾದವು ಇರಲೇಬೇಕು. ಜನರು ರೆಸ್ಟೊರೆಂಟ್, ಹೊಟೇಲ್’ಗಳಿಗೂ ಹೋಗಿ ನಾನ್ ವೆಜ್ ತಿನ್ನುತ್ತಾ ವಿಡಿಯೋ ಮಾಡುತ್ತಾರೆ. ಆದ್ರೆ, ನಾನ್ ವೆಜ್ ತಿನ್ನದ ನಗರವೊಂದು ನಮ್ಮ ದೇಶದಲ್ಲಿದೆ. ಅಲ್ಲಿ ನಾನ್ ವೆಜ್ ತಿನ್ನುವುದೇ ದೊಡ್ಡ ತಪ್ಪು. ತಿಂದರೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಹಾಗಿದ್ರೆ, ಆ ನಗರ ಯಾವುದು.?
ಗುಜರಾತ್‌ನ ಭಾವನಗರ ಜಿಲ್ಲೆಯ ಪಾಲಿಟಾನಾದಲ್ಲಿ ಮಾಂಸಾಹಾರಿ ತಿನ್ನುವುದನ್ನ ನಿಷೇಧಿಸಲಾಗಿದೆ. ಈ ಪ್ರದೇಶವು ಮಾಂಸವನ್ನ ನಿಷೇಧಿಸಿದ ವಿಶ್ವದ ಮೊದಲ ನಗರ ಎಂದು ಪ್ರಸಿದ್ಧವಾಗಿದೆ. ಇಲ್ಲಿ ನಾನ್ ವೆಜ್ ತಿನ್ನುವುದು ಮಹಾ ಪಾಪ. ಅಪರಾಧ ಎಂದು ಪರಿಗಣಿಸಲಾಗಿದೆ. ಇಲ್ಲಿ ಯಾವುದೇ ಸಂದರ್ಭದಲ್ಲೂ ಪ್ರಾಣಿಗಳನ್ನು ಕೊಲ್ಲುವುದಿಲ್ಲ. ಮಾಂಸ ಮಾರಾಟವೂ ಕಾನೂನು ಬಾಹಿರವಾಗಿದೆ.
ಕಾರಣವೇನು.?
2014ರಲ್ಲಿ ಮೊದಲ ಬಾರಿಗೆ ರಾಜ್‌ಕೋಟ್ ನಗರದಲ್ಲಿ ಮಾಂಸ ಸೇವನೆ ಮತ್ತು ಮಾರಾಟವನ್ನ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ರಾಜ್‌ಕೋಟ್ ನಗರದ ನಂತರ, ವಡೋದರಾ, ಜುನಾಗಡ್ ಮತ್ತು ಅಹಮದಾಬಾದ್ ನಗರಗಳು ಸಹ ಈ ನೀತಿಯನ್ನ ಅನುಸರಿಸಿದವು. 200ಕ್ಕೂ ಹೆಚ್ಚು ಜೈನ ಸನ್ಯಾಸಿಗಳು ಮಾಂಸಾಹಾರ ನಿಷೇಧಿಸುವಂತೆ ಪ್ರತಿಭಟನೆ ನಡೆಸಿದರು. ಈ ನಗರದಲ್ಲಿ ಜೈನ ಸನ್ಯಾಸಿಗಳು ಹೆಚ್ಚಾಗಿ ಇರುತ್ತಾರೆ. ಅವರ ಪ್ರತಿಭಟನೆಯ ನಂತರವೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇಲ್ಲಿ ಜೈನರಿಗೆ ಸಂಬಂಧಿಸಿದ ಅನೇಕ ಪುಣ್ಯಕ್ಷೇತ್ರಗಳೂ ಇವೆ. ಇನ್ನು ಮಾಂಸಾಹಾರ ಸೇವನೆಯು ಅನೇಕ ಕೆಟ್ಟ ಅಭ್ಯಾಸಗಳಿಗೆ ಕಾರಣವಾಗುತ್ತದೆ ಎಂದು ಅವರು ನಂಬುತ್ತಾರೆ.
ಹೀಗಾಗಿಯೇ ಪಾಲಿಟಾನಾ ನಗರದಲ್ಲಿ ಸಸ್ಯಾಹಾರಿ ಹೋಟೆಲ್’ಗಳು ತಲೆ ಎತ್ತಿವೆ. ಬಾಯಲ್ಲಿ ನೀರೂರಿಸುವ ತಿನಿಸುಗಳಿಂದ ಮನಸೆಳೆಯುತ್ತದೆ. ಈ ನಗರ ಜಗತ್ತಿನ ಗಮನವನ್ನೂ ಸೆಳೆದಿದೆ. ಅನೇಕ ಪ್ರವಾಸಿಗರು ಈ ನಗರಕ್ಕೆ ಭೇಟಿ ನೀಡುತ್ತಾರೆ. ಅಹಿಂಸೆ ಈ ನಗರದ ಮುಖ್ಯ ಧ್ಯೇಯವಾಗಿದೆ.
BREAKING : ಕಾಂಗ್ರೆಸ್ ನಾಯಕಿ ‘ಸೋನಿಯಾ ಗಾಂಧಿ’ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು
ಬೆಂಗಳೂರಿನ ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಈ ಐದು ದಾಖಲೆ ಅಪ್ ಲೋಡ್ ಮಾಡಿ, ಇ-ಖಾತಾ ಪಡೆಯಿರಿ
2025ರ ಆರ್ಥಿಕ ವರ್ಷದಲ್ಲಿ ಭಾರತದ ‘GDP’ ಬೆಳವಣಿಗೆ ದರ ಶೇ.6.5ಕ್ಕೆ ಏರಿಕೆ : ಹಣಕಾಸು ಸಚಿವಾಲಯ