ಬೆಳಗಾವಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಎಂಬಾತ ಪಡೆದ ಹಣ ವಾಪಾಸ್ ಕೇಳಿದಂತ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಕಿದ್ದನಂತೆ. ಹೀಗಾಗಿ ಗುತ್ತಿಗೆದಾರ ಇಂದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನಗೆ ಈಗಷ್ಟೇ ವಿಷಯ ತಿಳಿಯಿತು. ಯಾರೇ ಇರಲಿ, ನನ್ನ ಆಪ್ತನೇ ಆಗಿರಲಿ ತನಿಖೆ ಮಾಡಿಸುತ್ತೇವೆ ಎಂದರು.
ಅದು ನನ್ನ ಇಲಾಖೆಗೆ ಬರುತ್ತೆ. ಇಲಾಖಾ ತನಿಖೆ ಕೂಡ ನಡೆಸಲಾಗುತ್ತದೆ. ನಾನು ಯಾವುದೇ ಮುಚ್ಚು ಮರೆ ಮಾಡೋದಿಲ್ಲ. ಸಮಗ್ರ ತನಿಖೆಯಾಗಲಿ ಅಂತ ಗೃಹ ಸಚಿವರಿಗೂ ಮನವಿ ಮಾಡುವುದಾಗಿ ಹೇಳಿದರು.
ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಲಿ. ನನ್ನ ಆಪ್ತ ಅಥವಾ ಯಾರು ಅಂತ ತನಿಖೆಯಿಂದ ಗೊತ್ತಾಗುತ್ತದೆ ಎಂಬುದಾಗಿ ಬೆಳಗಾವಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರು ಜನತೆ ಗಮನಕ್ಕೆ: ನಾಳೆ ಬೆಳಿಗ್ಗೆ 10 ರಿಂದ 3ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
BREAKING : ಉದ್ಯೋಗಿಗಳಿಗೆ ಬಿಗ್ ರಿಲೀಫ್ ; ‘UAN’ ಜೊತೆಗೆ ‘ಆಧಾರ್’ ಲಿಂಕ್ ಗಡುವು ವಿಸ್ತರಣೆ |UAN-Aadhaar linking