ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಜನರು ರೀಲ್’ಗಳನ್ನ ಮಾಡಲು ಮತ್ತು ತಮ್ಮ ಚಂದಾದಾರರನ್ನ ಹೆಚ್ಚಿಸಿಕೊಳ್ಳಲು ಯಾವುದೇ ಹಂತಕ್ಕೆ ಬೇಕಾದ್ರು ಹೋಗುತ್ತಿದ್ದಾರೆ. ಸಧ್ಯ ಅಂತಹ ವಿಡಿಯೋವೊಂದು ಹೊರಬಿದ್ದಿದೆ. ಇದನ್ನು ನೋಡಿದ ಜನರು ಬೆಚ್ಚಿ ಬಿದ್ದಿದ್ದಾರೆ. ರೈಲುಗಳು, ಬಸ್ಸುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವೀಡಿಯೊಗಳನ್ನ ಮಾಡುವ ಜನರನ್ನ ನೀವು ನೋಡಿರಬೇಕು. ಅನೇಕ ಬಾರಿ ಅರ್ಧ ಬಟ್ಟೆ ಧರಿಸಿ ವೀಡಿಯೊಗಳನ್ನ ಮಾಡುತ್ತಾರೆ, ಸುತ್ತಮುತ್ತ ನಿಂತಿರುವವರೂ ಮುಜುಗರಕ್ಕೊಳಗಾಗುತ್ತಾರೆ.
ಅನೇಕ ಬಾರಿ ಜನರು ಅಪಾಯಕಾರಿ ವೀಡಿಯೊಗಳನ್ನ ಮಾಡುತ್ತಾರೆ, ಇದರಿಂದಾಗಿ ಅವರ ಪ್ರಾಣಕ್ಕೂ ಅಪಾಯ ಎದುರಾಗುತ್ತೆ. ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮಹಿಳೆಯೊಬ್ಬರು ನೇರವಾಗಿ ವಿದ್ಯುತ್ ಕಂಬ ಹತ್ತಿ ಡ್ಯಾನ್ಸ್ ಮಾಡುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ಮಹಿಳೆಗೆ ದೊಡ್ಡ ಅಪಾಯ ಸಂಭವಿಸಬಹುದು. ಈ ವಿಡಿಯೋ ಹೊರಬಿದ್ದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಜನರು ಇದನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಮಹಿಳೆ ವಿದ್ಯುತ್ ಕಂಬದ ಮೇಲೆ ನೃತ್ಯ.!
ಈ ವಿಡಿಯೋವನ್ನ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್’ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಿಳೆ ಯಾವುದೇ ಭಯವಿಲ್ಲದೆ ವಿದ್ಯುತ್ ಕಂಬವನ್ನ ಹತ್ತಿ ನೃತ್ಯ ಮಾಡುತ್ತಿರುವುದನ್ನು ನೋಡಬಹುದು, ಈ ವೀಡಿಯೊವನ್ನು ಮಹೇಶ್ಪಟೇಲ್ 8819 ಎಂಬ ಹ್ಯಾಂಡಲ್ನೊಂದಿಗೆ ಹಂಚಿಕೊಳ್ಳಲಾಗಿದೆ.
ನೆಟ್ಟಿಗರಿಂದ ನಿಂದನೆ.!
ಈ ವಿಡಿಯೋ ವೈರಲ್ ಆದ ನಂತ್ರ ಜನರು ಮಹಿಳೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ನೆಟ್ಟಿಗ, ‘ಯಮರಾಜ ಇಂಥ ಹುಚ್ಚರ ಹಾದಿಯನ್ನೇ ನೋಡುತ್ತಿದ್ದಾನೆ’ ಎಂದು ಬರೆದಿದ್ದರೆ, ಮತ್ತೊಬ್ಬರು ‘ಓ ರಾಣಿ, ದಯವಿಟ್ಟು ಟ್ರಾನ್ಸ್‌ಫಾರ್ಮರ್ ಬಿಟ್ಟು ಕೆಳಗಿಳಿ’ ಎಂದು ಬರೆದಿದ್ದಾರೆ.
https://www.instagram.com/reel/DDZCYcVM5Qc/?utm_source=ig_web_copy_link
ಮಣಿಪಾಲದ ‘ಅಜ್ಜ- ಅಜ್ಜಿ ಮೆಸ್’ಗೆ ಈ ಎಲ್ಲವನ್ನು ಉಚಿತವಾಗಿ ನೀಡಿದ ‘ರಿಲಯನ್ಸ್ ಡಿಜಿಟಲ್’
BREAKING: ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ್ ವೈಮಾನಿಕ ದಾಳಿ: 46 ನಾಗರೀಕರು ದುರ್ಮರಣ | Pakistan Air Strikes
Rules Change : ‘LPG ಬೆಲೆಯಿಂದ ಪಿಂಚಣಿವರೆಗೆ’ : ಜ.1ರಿಂದ ‘5 ದೊಡ್ಡ ಬದಲಾವಣೆ’ಗಳು, ನಿಮ್ಮ ಮೇಲೆ ನೇರ ಪರಿಣಾಮ