ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಆದರೇ ಹೀಗೆ ಎಸೆದಿರೋದರಲ್ಲಿ ಆ್ಯಸಿಡ್ ಮಾದರಿಯ ದ್ರವ್ಯ ಇದೆ ಎಂಬುದಾಗಿ ಹೇಳಲಾಗುತ್ತಿದೆ. ಹೀಗಾಗಿ ಅವರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇಂದು ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆಯಲಾಗಿತ್ತು. ಆದರೇ ಅದು ಮೊಟ್ಟೆಯಲ್ಲ ಆ್ಯಸಿಡ್ ಎಂಬುದಾಗಿ ಅವರೇ ಆರೋಪಿಸಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್, ಮಾಜಿ ಸಂಸದ ಡಿ.ಕೆ ಸುರೇಶ್ ಅವರೇ ಹೀಗೆ ಮಾಡಿಸಿದ್ದಾರೆ ಎಂಬುದಾಗಿ ಆರೋಪಿಸಿದ್ದರು.
ಈ ಬೆನ್ನಲ್ಲೇ ಶಾಸಕ ಮುನಿರತ್ನ ಮೇಲೆ ಎಸೆದಿರುವುದು ಮೊಟ್ಟೆಯಲ್ಲ. ಅದರಲ್ಲಿ ಆ್ಯಸಿಡ್ ಮಾದರಿಯ ದ್ರವ್ಯ ಇರೋದಾಗಿ ಹೇಳಲಾಗುತ್ತಿದೆ. ಹೀಗಾಗಿ ಕೆಸಿ ಜನರಲ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ 2 ಗಂಟೆಯಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಶಾಸಕ ಮುನಿರತ್ನಗೆ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಮೇಲ್ನೋಟಕ್ಕೆ ಆಸಿಡ್ ಎಂಬುದಾಗಿ ಹೇಳಲಾಗುತ್ತಿರುವುದರಿಂದ ವೈದ್ಯೆ ಪಂಕಜಾ ಅವರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಅಮೆರಿಕಕ್ಕೆ ಭಾರತೀಯರ ಕಳ್ಳಸಾಗಣೆ : ಕೆನಡಾದ 200ಕ್ಕೂ ಹೆಚ್ಚು ಕಾಲೇಜುಗಳ ಕುರಿತು ‘ED’ ತನಿಖೆ